ಪ್ರತಿಭಾವಂತ 125 ಸಂಸ್ಕೃತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2019-07-21 15:28 GMT

ಉಡುಪಿ, ಜು.21: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಂಸ್ಕೃತ ಅಧ್ಯಾಪಕರ ಸಂಘದ ವತಿಯಿಂದ ಎಸೆಸೆಲ್ಸಿಯ ಸಂಸ್ಕೃತ ಪರೀಕ್ಷೆಯಲ್ಲಿ 125ಕ್ಕೆ 125/124 ಅಂಕಗಳನ್ನು ಪಡೆದ ಸುಮಾರು 125 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ನಿತ್ಯ ಮನೆಯಲ್ಲಿ ಹೆತ್ತವರೊಂದಿಗೆ ಸಂಸ್ಕೃತ ದಲ್ಲಿಯೇ ಮಾತನಾಡಬೇಕು. ದಿನಕ್ಕೆ 10 ವಾಕ್ಯಗಳನ್ನು ಕಲಿತಲ್ಲಿ ಮುಂದೆ, ಈ ಮನೆಯಲ್ಲಿ ಸಂಸ್ಕೃತದಲ್ಲಿ ವ್ಯವಹರಿಸಬಹುದು ಎಂದು ಹೇಳಿದರು.

ಸಂಘದ ಅಧ್ಯಕ್ಷ ಶ್ರೀಧರ ಆಚಾರ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ದರು. ಕೋಶಾಧಿಕಾರಿ ಶೃಂಗೇಶ್ ವಂದಿಸಿದರು. ಪದಾಧಿಕಾರಿ ನಾಗರಾಜ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News