ಬ್ರಹ್ಮಾವರ: ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2019-07-21 15:47 GMT

ಬ್ರಹ್ಮಾವರ, ಜು.21: ಗದ್ದೆಯ ನಡುವಿನ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜು.21ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನಡೂರು ಗ್ರಾಮದ ಕಂಡಿಕೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಂಡಿಕೆ ನಿವಾಸಿ ಲಕ್ಷ್ಮೀ(55) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು ಗದ್ದೆಯ ನಾಟಿ ಮಾಡಲು ಹೋಗುತ್ತಿದ್ದಾಗ ಗದ್ದೆಗೆ ಹೋಗುವ ದಾರಿಯ ಅಂಚಿನಲ್ಲಿರುವ ಆವರಣ ಇಲ್ಲದ ಬಾವಿಗೆ ಅಕಸ್ಮಾತ್ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News