ರಾ. ಹೆದ್ದಾರಿಯ ರಸ್ತೆ ಹೊಂಡ ಮುಚ್ಚಿ ಮಾದರಿಯಾದ ಅರಬ್ ರೈಡರ್ಸ್ ಕ್ಲಬ್ ಸದಸ್ಯರು

Update: 2019-07-21 16:32 GMT

ಮಂಜೇಶ್ವರ: ಕಾಸರಗೋಡು-ಮಂಗಳೂರು ರಾ. ಹೆದ್ದಾರಿಯ ತಲಪಾಡಿ ಮೋಟೆಲ್ ಆರಾಮ್ ಮುಂಬಾಗದಲ್ಲಿರುವ ರಾ. ಹೆದ್ದಾರಿಯಲ್ಲಿ ಸೃಷ್ಟಿಯಾಗಿದ್ದ ಬೃಹತ್ ಗಾತ್ರದ ಹೊಂಡಗಳನ್ನು ಶ್ರಮದಾನದ ಮೂಲಕ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ನ ಸದಸ್ಯರು ಹೊಂಡಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಮಾದರಿಯಾಗಿದ್ದಾರೆ. 

ಈ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅದಚಣೆಯಾಗುವುದರ ಜೊತೆಯಾಗಿ ಅಪಘಾತಗಳಿಗೂ ಕಾರಣವಾಗುತಿತ್ತು. ಅರಬ್ ರೈಡರ್ಸ್ ಸದಸ್ಯರ ಶ್ರಮದಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕ್ಲಬ್ ಅಧ್ಯಕ್ಷ ಯಯ್ಯಾ, ಕಾರ್ಯದರ್ಶಿ ಸಿದ್ದೀಖ್ ತಂಙಳ್, ಕೋಶಾಧಿಕಾರಿ ಅಶ್ರಫ್ ಸಕ್ಲಿನ್, ಕೊಲ್ಲಿ ರಾಷ್ಟ್ರದ ಪ್ರತಿನಿಧಿಗಳಾದ ಇಸ್ಮಾಯಿಲ್ ಎಂ ಪಿ, ಅಬ್ದುಲ್ ಲತೀಫ್ ಬಾಬಾ, ಅಬ್ದುಲ್ ಸತ್ತಾರ್,  ಮುನೀರ್ ತೂಮಿನಾಡು, ಅಶ್ರಫ್ ಕೋಯಿನ್ನೂರು, ತಮ್ಮಿ, ಸಮೀರ್, ತೌಶೀಫ್, ಅಲ್ ಫರಾಝ್ , ತಂಚಿ ಸೇರಿದಂತೆ ತೂಮಿನಾಡಿನ ಹಲವಾರು ಯುವಕರು ಶ್ರಮದಾನ ಕಾರ್ಯಕ್ಕೆ ಕೈ ಜೋಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News