×
Ad

ಈಶ್ವರಮಂಗಲ: ಮರಬಿದ್ದು ಎರಡು ವಾಹನಗಳಿಗೆ ಹಾನಿ

Update: 2019-07-21 23:36 IST

ಈಶ್ವರಮಂಗಲ: ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಾಂಡಿ ಸಮೀಪ ರಸ್ತೆ ಬದಿಯ ಹೊಂಡ ಭಾಗದಲ್ಲಿದ್ದ ಮರವೊಂದು ಬುಡಸಮೇತ ಉರುಳಿ ಗ್ಯಾರೇಜೊಂದರ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಎರಡು ವಾಹನಗಳ ಮೇಲೆ ಬಿದ್ದಿದೆ.

ಬೈಪಾಸ್ ರಸ್ತೆಯ ಉರ್ಲಾಂಡಿಯಲ್ಲಿರುವ ಕಾರ್ ಪಾೈಂಟ್ ಗ್ಯಾರೇಜಿನ ಪಕ್ಕದಲ್ಲಿ ಈ ಘಟನೆ ಶನಿವಾರ ರಾತ್ರಿ ನಡೆದಿದೆ. ರಸ್ತೆ ಬದಿಯ ಹೊಂಡ ಭಾಗದಲ್ಲಿ ನೀರು ತುಂಬಿಕೊಂಡಿದ್ದ ಪರಿಣಾಮವಾಗಿ, ಮಣ್ಣು ಸಡಿಲಿಕೆಗೊಂಡು ಮರ ಬುಡ ಸಮೇತ ಉರುಳಿ ಬಿದ್ದಿದೆ. 

ದುರಸ್ತಿಗಾಗಿ ತಂದು ಗ್ಯಾರೇಜು ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಹಾಗೂ ಮಾರುತಿ 800 ಕಾರುಗಳ ಮೇಲೆಯೇ ಮರ ಉರುಳಿ ಬಿದ್ದ ಪರಿಣಾಮವಾಗಿ ಈ ಎರಡು ವಾಹನಗಳಿಗೆ ಹಾನಿಯಾಗಿದೆ. ಮಾರುತಿ ಓಮ್ನಿ ವಿನೋದ್ ಎಂಬವರಿಗೆ ಸೇರಿದ್ದೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News