ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

Update: 2019-07-21 18:13 GMT

ಪುತ್ತೂರು: ಶನಿವಾರ ರಾತ್ರಿ ಸುರಿದ ಬಾರೀ ಮಳೆಯಿಂದಾಗಿ ರವಿವಾರ ಪುತ್ತೂರು-ಪಾಣಾಜೆ ಸಂಪರ್ಕದ ಇರ್ದೆ ಗ್ರಾಮದ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದೆ. 

ಪ್ರತೀ ಮಳೆಗಾಲದಲ್ಲಿಯೂ ಮುಳುಗಡೆಯಾಗುತ್ತಿರುವ 'ಮುಳುಗು ಸೇತುವೆ' ಎಂದೇ ಕರೆಯಲ್ಪಡುತ್ತಿರುವ ಚೆಲ್ಯಡ್ಕ ಸೇತುವೆ ಈ ಮಳೆಗಾಲದಲ್ಲಿ ಮೊದಲ ಬಾರಿ ಮುಳುಗಡೆಯಾಗಿದೆ. 

ಇದರಿಂದಾಗಿ ಇಲ್ಲಿನ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಈ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು ಹಾಗೂ ಇನ್ನಿತರ ವಾಹನಗಳು ಮಾಣಿ ಮೈಸೂರು ರಸ್ತೆಯ ಮೂಲಕ ಸಾಗಿ ಹಂಟ್ಯಾರು ಬಳಿಯಲ್ಲಿ ರೆಂಜಕ್ಕೆ ತಿರುವು ಪಡೆದುಕೊಂಡು ಸುತ್ತಿ ಬಳಸಿ ಸಾಗಿದವು. 

ಈ ಸೇತುವೆಯ ಅಡಿಭಾಗಗಲು ಕುಸಿದು ಹೋಗಿದ್ದು, ಸೇತುವೆ ತೀರಾ ನಾದುರಸ್ತಿಯಲ್ಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯನ್ನು ದುರಸ್ತಿಗೊಳಿಸುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದರು. ಆದರೆ ಸೇತುವೆ ದುರಸ್ತಿ ಕಾರ್ಯ ಮಾತ್ರ ನಡೆದಿರಲಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಚೆಲ್ಯಡ್ಕ ಸೇತುವೆ ಸುಮಾರು ನಾಲ್ಕು ಬಾರಿ ಮುಳುಗಡೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News