ಸ್ಫೂರ್ತಿ ವಿಶೇಷ ಶಾಲೆಯಲ್ಲಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಆರೋಗ್ಯ ಶಿಬಿರ

Update: 2019-07-21 18:22 GMT

ಮೂಡುಬಿದಿರೆ: ಆಯುಷ್ಯಾ ವೆಲ್‍ನೆಸ್ ಸಂಸ್ಥೆಯ ವತಿಯಿಂದ ಇಲ್ಲಿನ ಅರಮನೆಬಾಗಿಲು ಬಳಿಯಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯ ಉಚಿತ ಶಿಬಿರ ಹಾಗೂ ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ರವಿವಾರ ಏರ್ಪಡಿಸಲಾಗಿತ್ತು. 

ಆಯುಷ್ಯಾ ವೆಲ್‍ನೆಸ್ ಸಂಸ್ಥೆಯ ಡಾ.ವಿನಯ ಪ್ರಸಾದ್ ಮಾತನಾಡಿ, ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಪೋಷಕರು ಹೊಂದಿರುವುದು ಅಗತ್ಯ. ಪ್ರಕೃತಿ ಚಿಕಿತ್ಸೆಯಂತಹ ಭಾರತೀಯ ಔಷಧಿ ಪದ್ಧತಿ ಮೂಲಕ ಮಕ್ಕಳು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಬಹುದು. ಯೋಗದ ಮುಖೇನ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. 

ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್ ಗಫೂರ್, ಅಲಂಗಾರು ಲಯನ್ಸ್ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ಹೆರಾಲ್ಡ್ ತಾವ್ರೊ, ಡಾ.ವಿನಯ ಪ್ರಸಾದ್ ಅವರ ತಾಯಿ ತೆರೆಜಾ ಡಿ'ಸೋಜ ಸ್ಫೂರ್ತಿ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ ಉಪಸ್ಥಿತರಿದ್ದರು. 
ಸುಚಿತ್ರಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತನಾಝ್ ವಂದಿಸಿದರು. 

50 ಮಂದಿ ವಿಶೇಷ ಮಕ್ಕಳು ಸಹಿತ 100 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜವನ್ನು ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News