ಕೇಂದ್ರ ಬಜೆಟ್ ಜನರ ನಿರೀಕ್ಷೆ ಮಟ್ಟದಲ್ಲಿ ಇರಲಿಲ್ಲ: ವೈ.ಗಣೇಶ್ ರಾವ್

Update: 2019-07-22 14:29 GMT

ಉಡುಪಿ, ಜು.22: ಈ ಬಾರಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಜನಪರವಾಗಿದ್ದರೂ ಜನರು ನಿರೀಕ್ಷಿಸಿದ ಮಟ್ಟ ದಲ್ಲಿ ಇರಲಿಲ್ಲ ಎಂದು ಉಡುಪಿಯ ಲೆಕ್ಕಪರಿಶೋಧಕ ವೈ.ಗಣೇಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ವತಿಯಿಂದ ಸೋಮವಾರ ವೇದಿಕೆಯ ಕಚೇರಿಯಲ್ಲಿ ಆಯೋಜಿಸಲಾದ 2019-20ರ ಕೇಂದ್ರ ಆಯವ್ಯಯ ಪಟ್ಟಿ ಕುರಿತ ಮುಖಾಮುಖಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.

ಈ ಬಜೆಟ್‌ನಲ್ಲಿ ಜನರಿಗೆ ಪ್ರಯೋಜನವಾಗುವಂತಹದನ್ನು ಸಾಕಷ್ಟು ನೀಡ ಲಾಗಿದೆ. ಸಾಕಷ್ಟು ಕೊರತೆಗಳ ನಡುವೆಯೂ ಜನರಿಗೆ ಲಾಭ ಆಗುವ ರೀತಿ ಯಲ್ಲಿ ಬಜೆಟ್ ಮಂಡಿಸಲಾಗಿದೆ. ಅದೇ ರೀತಿ ವಿವಿಧ ಹೊಸ ತೆರಿಗೆಗಳ ಮೂಲಕ ಸರಕಾರ ಆದಾಯವನ್ನು ಕೂಡ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ಸುಮಾರು 10,000 ಕೋಟಿ ರೂ. ಆದಾಯ ಬರುವಂತಹ ಬಜೆಟ್ ಇದಾಗಿದೆ ಎಂದು ಅವರು ಹೇಳಿದರು.

ಜನರ ವಿಮೆಯನ್ನು ಕೂಡ ಆದಾಯ ಎಂಬುದಾಗಿ ಪರಿಗಣಿಸಿ ಅದಕ್ಕೂ ತೆರಿಗೆ ವಿಧಿಸಲಾಗಿದೆ. ಹಿಂದೆ ಕೇವಲ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಮೂಲ ದಲ್ಲಿ ತೆರಿಗೆ ಕಡಿತವಾಗುತ್ತಿತ್ತು. ಆದರೆ ಈಗ ಯಾವುದೇ ವ್ಯಕ್ತಿ ವರ್ಷಕ್ಕೆ 50ಲಕ್ಷ ರೂ.ಗಿಂತ ಹೆಚ್ಚು ವೆಚ್ಚದ ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಕೂಡ ಮೂಲದಲ್ಲಿ ತೆರಿಗೆ ಕಡಿತಕ್ಕೆ ಒಳಗಾಗಬೇಕು. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗಿದೆ ಎಂದರು.

ಗರಿಷ್ಟ ತೆರಿಗೆ ಪಾವತಿದಾರರಿಗೆ ಶಾಕ್ ನೀಡಿರುವ ಈ ಬಜೆಟ್, ಅವರಿಗೆ ಇನ್ನಷ್ಟು ತೆರಿಗೆಳನ್ನು ವಿಧಿಸಿದೆ. ವಿದೇಶಿ ಯಾತ್ರೆ ತೆರಳುವವರು ಹಾಗೂ ಅವರಿಗೆ ಪ್ರಾಯೋಜಕತ್ವ ನೀಡಿದವರು ಮತ್ತು ಒಂದು ಲಕ್ಷ ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವವರು ಕೂಡ ಆದಾಯ ತೆರಿಗೆಯ ರಿಟರ್ನ್ ಫೈಲ್ ಮಾಡ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮುಖಾಮುಖಿಯಲ್ಲಿ ಮಾತನಾಡಿದ ರಾಮಚಂದ್ರ, ಈ ಬಾರಿಯ ಬಜೆಟ್ ಷೇರು ಮಾರುಕಟ್ಟೆಗೆ ಬಹಳ ದೊಡ್ಡ ಮಟ್ಟದ ಪರಿಹಾರ ನೀಡಿಲ್ಲ. ಮೂಚ್ಯು ವಲ್ ಫಂಡ್‌ಗೆ ಈ ಬಜೆಟ್‌ನಿಂದ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಇದಕ್ಕೆ ಹಣ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಈ ಬಜೆಟ್ ಹೂಡಿಕೆದಾರರ ಪರವಾಗಿ ಇಲ್ಲ. ಬಜೆಟ್‌ನಿಂದ ಷೇರು ಮಾರುಕಟ್ಟೆ ಬಹಳಷ್ಟು ಕುಸಿತ ಕಂಡುಬಂದಿದ್ದು, ಇನ್ನು ಚೇತರಿಸಿಕೊಳ್ಳಲು ಸುಮಾರು ಒಂದು ವರ್ಷ ಗಳ ಕಾಲಾವಕಾಶವಾದರೂ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವೇದಿಕೆಯ ಸಂಚಾಲಕ ದಾಮೋದರ ಐತಾಳ್ ವಹಿಸಿದ್ದರು. ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಯು.ವಾದಿರಾಜ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು. ಯು.ಎಲ್.ಕಾಮತ್ ವಂದಿಸಿದರು. ಐ.ಕೆ.ಜಯಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News