ಕ್ಯಾಲಿಫೋರ್ನಿಯಾದಲ್ಲಿ ಯಕ್ಷಗಾನ ಸಮ್ಮೇಳನ: ಬಡಗುತಿಟ್ಟಿನ ಭಾಗವತ ಕೆ.ಜೆ.ಗಣೇಶ್ ಅಮೆರಿಕಾಕ್ಕೆ

Update: 2019-07-22 14:30 GMT

ಉಡುಪಿ, ಜು.22: ಅಮೆರಿಕಾದ ಕ್ಯಾಲಿಫೋರ್ನಿಯಾದ ಎಸ್‌ವೈಆರ್‌ಸಿಸಿ ಮತ್ತು ಕೆಕೆಎನ್‌ಸಿ ವತಿಯಿಂದ ಆ.3 ಮತ್ತು 4ರಂದು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾದ ಪ್ರಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಲು ಬಡಗುತಿಟ್ಟಿನ ಖ್ಯಾತ ಭಾಗವತ ಕೆ.ಜೆ.ಗಣೇಶ್ ಕಿದಿಯೂರು ಜು.23ರಂದು ಅಮೆರಿಕಾಕ್ಕೆ ತೆರಳಲಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಕೆ.ಜೆ.ಗಣೇಶ್ ಈ ಕುರಿತು ಮಾಹಿತಿ ನೀಡಿದರು. ಸಮ್ಮೇಳನದ ಮೊದಲ ದಿನ ಕೆ.ಜೆ.ಗಣೇಶ್ ಮತ್ತು ಪಟ್ಲ ಸತೀಶ್ ಶೆಟ್ಟಿಯವರ ದ್ವಂದ್ವ ಗಾಯನ ನಡೆಯಲಿದ್ದು, ನಂತರ ಗಣೇಶ್ ನಿರ್ದೇಶನದಲ್ಲಿ ಭೀಷ್ಮ ವಿಜಯ ಎಂಬ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಮುಂದೆ ಯಕ್ಷ ಬಳಗದ ಸದಸ್ಯರ ವತಿಯಿಂದ ಒಂದು ತಿಂಗಳ ಕಾಲ ಆಸಕ್ತ ಯಕ್ಷಾಭಿಮಾನಿಗಳಿಗೆ ನಾಟ್ಯಾಭ್ಯಾಸವನ್ನು ಮಾಡಿಸಿ ಪ್ರಸಂಗ ನಿರ್ದೇಶಿಸಿ ಪ್ರದರ್ಶಿಸಲಾಗುತ್ತದೆ.

ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಮುಖ್ಯ ಭಾಗವತರಾಗಿರುವ ಇವರು, ಅನೇಕ ಸಂಘ ಸಂಸ್ಛೆಗಳಲ್ಲಿ ಯಕ್ಷಗುರು ಗಳಾಗಿ ನಿರ್ದೇಶನ ನೀಡುತ್ತಿದ್ದಾರೆ. ಆಕಾಶವಾಣಿಯಲ್ಲಿ ಯಕ್ಷಗಾನ ಹಾಡು ಗಳು ಮತ್ತು ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಯಕ್ಷಗಾನಕ್ಕೆ ಸಂಬಂಧಿಸಿ ಈ ಹಿಂದೆ ಐದು ಬಾರಿ ಅಮೆರಿಕಾಕ್ಕೆ ತೆರಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಉಪಾಧ್ಯಕ್ಷ ಕೆ.ಅಜಿತ್ ಕುಮಾರ್, ಕಾರ್ಯದರ್ಶಿ ಕೆ.ಜೆ.ಕೃಷ್ಣ, ಕನ್ಯಾನ ಜನಾರ್ದನ ಆಚಾರ್ಯ, ಕಿಶೋರ್ ಆಚಾರ್ಯ, ಕೆ.ನರಸಿಂಹ ಆಚಾರ್ಯ ಉಪಸ್ಥಿತರದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News