ಹಳೆ ಡ್ರಗ್ಸ್ ಆರೋಪಿಗಳಿಗೆ ಕಮಿಷನರ್ ಖಡಕ್ ಸೂಚನೆ

Update: 2019-07-22 15:17 GMT

ಮಂಗಳೂರು, ಜು.22: ನಗರದಲ್ಲಿ ತನ್ನ ಕರಾಳಹಸ್ತ ಚಾಚಿರುವ ಡ್ರಗ್ಸ್ ವಿರುದ್ಧ ಸಮರ ಸಾರಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸೋಮವಾರ ಹಳೆಯ ಡ್ರಗ್ಸ್ ಆರೋಪಿಗಳ ಪರೇಡ್ ನಡೆಸಿ, ಖಡಕ್ ಸೂಚನೆ ರವಾನಿಸಿದ್ದಾರೆ.

 ಈ ಹಿಂದೆ ಮಾದಕ ವಸ್ತು ಮಾರಾಟ, ಸಾಗಾಟ ಮುಂತಾದ ಅಕ್ರಮಗಳಲ್ಲಿ ಭಾಗಿಯಾಗಿದ್ದ ಸುಮಾರು 94 ಹಳೆಯ ಆರೋಪಿಗಳ ಪೆರೇಡ್‌ನ್ನು ಆಯುಕ್ತರು ನಡೆಸಿದರು. ಮಾದಕ ವಸ್ತುಗಳ ದಂಧೆಗಳನ್ನು ಹತ್ತಿಕ್ಕಲು ಇಲಾಖೆ ಸನ್ನದ್ಧವಾಗಿದೆ. ಯಾವುದೇ ಕಾರಣಕ್ಕೂ ಸಮಾಜದ ಸ್ವಾಸ್ಥ್ಯ ಕದಡುವ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News