ಕಲಬೆರಕೆ ತುಪ್ಪ ಮಾರಾಟ: ಇಬ್ಬರು ಆರೋಪಿಗಳು ಸೆರೆ

Update: 2019-07-22 15:27 GMT

ಬಂಟ್ವಾಳ : ಗ್ರಾಹಕರಿಗೆ ಮೋಸ ಮಾಡಿ ಕಲಬೆರಕೆ ತುಪ್ಪ ಮಾರಾಟದ ಆರೋಪದ ಮೇರೆಗೆ ಸ್ಥಳೀಯರು ಇಬ್ಬರು ವ್ಯಕ್ತಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.

ಇಲ್ಲಿನ ಬುಡೋಳಿ ಜೋಗಿಬೆಟ್ಟು ಸಮೀಪದ ಮನೆ, ಮನೆಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಪ್ಪ ಮಾರಾಟ ಮಾಡಲು ಬಂದಿದ್ದ ಬಳ್ಳಾರಿ ಮೂಲದ ಇಬ್ಬರ ಮೇಲೆ ಸಂಶಯ ವ್ಯಕ್ತಪಡಿಸಿ, ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅರ್ಧ ಲೀಟರ್ ಬಾಟಲಿಯ ತುಪ್ಪಕ್ಕೆ 250 ರೂ. ಅಂತೆ ಹಾಗೂ ಇನ್ನು ಕೆಲವು ಕಡೆಗಳಲ್ಲಿ 100 ರೂ. ಗೂ ಮಾರಾಟ ಮಾಡಿದ್ದು, ಇದರಲ್ಲಿ ಕಲಬೆರಕೆ ಮಾಡಿರುವ ಬಗ್ಗೆ ಜೋಗಿಬೆಟ್ಟುವಿನ ನಾಗರಿಕರು ಪೊಲೀಸರಲ್ಲಿ ದೂರಿಕೊಂಡಿದ್ದಾರೆ.

ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ವಿಟ್ಲ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News