ಪುತ್ತೂರು ನಗರಸಭಾ ಪೌರಾಯುಕ್ತರಿಂದ ಪಿ.ಜಿಗಳಿಗೆ ದಾಳಿ: ಪರಿಶೀಲನೆ

Update: 2019-07-22 16:32 GMT

ಪುತ್ತೂರು: ನಗರದ ಕಾಲೇಜು ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದ ಪಿ.ಜಿ (ಪೇಯಿಂಗ್ ಗೆಸ್ಟ್)ಗಳಿಗೆ ಸೋಮವಾರ ನಗರಸಭೆಯ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ನಗರದಲ್ಲಿ 5 ಪಿಜಿಗಳನ್ನು ಭೇಟಿಯಾಗಿ ಪರಿಶೀಲನೆ ನಡೆಸಿದ ಸಂದರ್ಭದಲಿ 3 ಪಿಜಿಗಳು ಇನ್ನೂ ಪರವಾನಿಗೆ ನವೀಕರಿಸದಿರುವುದು ಹಾಗೂ 2 ಪಿಜಿಗಳು ಪರವಾನಿಗೆ ಪಡೆಯದೆ ಕಾರ್ಯಾಚರಿಸುತ್ತಿದ್ದ ಬೆಳಕಿಗೆ ಬಂದಿತ್ತು.  ಕಾಲೇಜು ಪರಿಸರದಲ್ಲಿ ಸುಮಾರು 50ಕ್ಕೂ ಅಧಿಕ ಪಿ.ಜಿಗಳಿದ್ದು ಈ ಪೈಕಿ ಕೇವಲ 7 ಪಿಜಿಗಳು ಮಾತ್ರ ನಗರಸಭೆಯಿಂದ ಪರವಾನಿಗೆ ಪಡೆದುಕೊಂಡಿದ್ದು, ಉಳಿದ ಪಿಜಿಗಳು ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಹಾಗೂ ತನಿಖೆ ನಡೆಸುವಂತೆ ಈ ಸಂದರ್ಭದಲ್ಲಿ ಪೌರಾಯುಕ್ತರು ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News