ಜು.24ರಿಂದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಮತ ಪ್ರವಚನ
Update: 2019-07-22 22:04 IST
ಮಂಗಳೂರು, ಜು.22: ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಶೇಖ್ ಸೈಯದ್ ಮುಹಮ್ಮದ್ ವೌಲ ಜಲಾಲ್ ಮಸ್ತಾನ್ ಅಲ್ ಬುಖಾರಿ ಅವರ 93ನೇ ಆಂಡ್ ನೇರ್ಚೆಯ ಪ್ರಯುಕ್ತ ಜು.24ರಿಂದ 26ರವರೆಗೆ ಇಶಾ ನಮಾಜ್ ಬಳಿಕ ಉಲಮಾಗಳಿಂದ ಧಾರ್ಮಿಕ ಮತ ಪ್ರವಚನೆ ನಡೆಯಲಿದೆ.
ಜು.27ರಂದು ಬೆಳಗ್ಗೆ 9:30ಕ್ಕೆ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಕೂಟು ಝಿಯಾರತ್, ಖತಮುಲ್ ಕುರ್‌ಆನ್ ಹಾಗೂ ಸಿಲ್‌ಸಿಲಾ ಪಾರಾಯಣ ನಡೆಯಲಿದೆ. ಅನ್ಸಾರಿ ರಸ್ತೆಯಲ್ಲಿರುವ ಯತೀಂಖಾನ ಹಾಲ್‌ನಲ್ಲಿ ಮಧ್ಯಾಹ್ನ 12ರಿಂದ ಅನ್ನದಾನ (ಅನ್ನ ಸಂತರ್ಪಣೆ) ನಡೆಯಲಿದೆ ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.