ಬೊಳ್ಳೂರಿನಲ್ಲಿ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜ್ ಉದ್ಘಾಟನೆ

Update: 2019-07-22 16:45 GMT

ಮುಲ್ಕಿ, ಜು. 22: ಪುರುಷರು ಮತ್ತು ಮಹಿಳೆಯರೆಂಬ ಬೇಧ ಭಾವವಿಲ್ಲದೆ ಎಲ್ಲರೂ ಬೌಧಿಕ ಹಾಗೂ ಧಾರ್ಮಿಕ ಶಿಕ್ಷಣ ಪಡೆಯುವಂತಾಗಬೇಕು. ವಿಶೇಷವಾಗಿ ಮಹಿಳೆಯರಿಗೆ ಉನ್ನತ ವಿದ್ಯಾಭ್ಯಾಸ ನೀಡಬೇಕೆಂದು ಸೈಯದ್ ಕೆ. ಎಸ್. ಆಲೀ ತಂಙ್ಞಳ್ ಕುಂಬೋಲ್ ಹೇಳಿದ್ದಾರೆ.

ಹಳೆಯಂಗಡಿ ಬೊಳ್ಳೂರಿನ ಶಂಸುಲ್ ಉಲಮಾ ಮೆಮೊರಿಯಲ್ ಫೌಂಡೇಷನ್‌ನ ವತಿಯಿಂದ ಬೊಳ್ಳೂರು ಪರಿಸರದಲ್ಲಿ ನೂತನವಾಗಿ ಆರಂಭಗೊಂಡ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ದೇಶ ಅಭಿವೃದ್ಧಿ ಹೊಂದಿದ್ದು, ವಿವಿಧೆಡೆಗಳಲ್ಲಿ ಧಾರ್ಮಿಕ ಅರೆಬಿಕ್ ಕಾಲೇಜ್‌ಗಳು, ಹಿಫ್ಲ್ ಕಾಲೇಜ್‌ಗಳು ಕಾರ್ಯಾಚರಿಸುತ್ತಿವೆ. ಅಂತೆಯೇ ಬೌದಿಕ ವಿದ್ಯಾಭ್ಯಾಸ ನೀಡಲು ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ನಮ್ಮ ಸುತ್ತಮುತ್ತಲಿವೆ. ಆದ್ದರಿಂದ ಯಾರೂ ವಿದ್ಯಾರ್ಜನೆಗೆ ಹಿಂಜರಿಯದೇ ವಿದ್ಯೆ ಪಡೆಯಬೇಕೆಂದು ಕರೆ ನೀಡಿದರು.

ಮುಖ್ಯಭಾಷಣ ಗೈದ ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ, ಇಂದಿನ ಕಾಲ ಘಟ್ಟದಲ್ಲಿ ಇಂತಹ ಮಹಿಳಾ ಶರೀಅತ್ ಕಾಲೇಜ್‌ಗಳು ಅತ್ಯಗತ್ಯವಾಗಿದ್ದು, ಮಹಿಳೆಯರಿಗೆ ಧಾರ್ಮಿಕ ವಿದ್ಯೆ ಕಲಿಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ಉಸ್ತಾದ್ ವಹಿಸಿದ್ದರು, ಇರ್ಷಾದ್ ದಾರಿಮಿ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಸಮಿತಿಯ ಅಧ್ಯಕ್ಷ ಬಿ.ಇ. ಮುಹಮ್ಮದ್,ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಘಟಕಾಧ್ಯಕ್ಷ ಯೂಸೂಫ್ ಇಂದಿರಾನಗರ, ಬೊಳ್ಳೂರು ಘಟಕಾಧ್ಯಕ್ಷ ಅಕೀಲ್ ಎಮ್.ಸಿ.ಎಫ್., ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ ಬಿ.ಎಂ. ಇಬ್ರಾಹಿಂ, ಕಾರ್ಯದರ್ಶಿ ಹನೀಫ್ ಐ.ಎ.ಕೆ, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರೆಹ್ಮಾನ್ ಕುಡುಂಬೂರ್, ಜಂಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಅಧ್ಯಕ್ಷ ಹಾಜಿ ಹನೀಫ್ ದಾರಿಮಿ ಇಡ್ಯಾ, ಕದಿಕೆ ಮಸೀದಿ ಅಧ್ಯಕ್ಷ ಸಾವುಲ್ ಹಮೀದ್ ಕದಿಕೆ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಮ್. ಅಬ್ದುಲ್ ಖಾದರ್, ಎಚ್. ವಸಂತ್ ಬೆರ್ನಾಡ್, ಅಬ್ದುಲ್ ಅಝೀಝ್ ಐ.ಎ.ಕೆ., ಹಾಜಿ ಅಬ್ದುಲ್ ಮಜೀದ್ ಸಿತಾರ್, ಸಲೀಂ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.

ಜಿ.ಎಮ್. ದಾರಿಮಿ ಅಂಕೋಲಾ ಸ್ವಾಗತಿಸಿದರು, ಹೈದರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News