ಬಂಟ್ವಾಳ ಪುರಸಭೆ ವ್ಯಾಪ್ತಿಯ ತ್ಯಾಜ್ಯ ಸಂಗ್ರಹಣಾ ಶುಲ್ಕ ಇಳಿಕೆ

Update: 2019-07-22 16:47 GMT

ಬಂಟ್ವಾಳ, ಜು. 22: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಸೂಚನೆಯಂತೆ ಪುರಸಭೆಯ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ವಾಣಿಜ್ಯ ಕೈಗಾರಿಕೆ ಮತ್ತು ಮಳಿಗೆಗಳಿಗೆ ಸಂಬಂಧಿಸಿ ಇಳಿಕೆ ಮಾಡಲಾಗಿದೆ ಎಂದು ಪುರಸಭೆ ಪ್ರಕಟನೆ ನೀಡಿದೆ.

ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿ ಎ.1ರಿಂದ ಶುಲ್ಕವನ್ನು ವಸೂಲು ಮಾಡಲಾಗುತ್ತಿದ್ದು, ಈ ಸಂಬಂಧ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ತ್ಯಾಜ್ಯ ಸಂಗ್ರಹಣಾ ಶುಲ್ಕ ಅತ್ಯಧಿಕವಾಗಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಮಾಡಿದ್ದರು.

ಈ ಸಂಬಂಧ ಜುಲೈ 2ರಂದು ಪುರಸಭಾ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಗೆ ಹೊರೆಯಾಗುತ್ತಿರುವ ವಾಣಿಜ್ಯ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಕಡಿತಗೊಳಿಸಲು ಮಂಗಳೂರು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಬಂಟ್ವಾಳ ಪುರಸಭೆ ಜುಲೈ 20ರಂದು ವಾಣಿಜ್ಯ, ಕೈಗಾರಿಕೆ, ಮಳಿಗೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಡಿಪಿಆರ್ ದರಗಳಿಂತ ಕಡಿಮೆ ಮಾಡಿ ಪರಿಷ್ಕರಿಸಿದೆ ಎಂದು ತಿಳಿಸಿದೆ.

ಶುಲ್ಕ ಪರಿಷ್ಕರಣೆಗೆ ಸ್ವಾಗತ:

ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕ ಅತಿಯಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದು, ಇದರ ಪರಿಣಾಮವಾಗಿ ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ಇದೀಗ ಪರಿಷ್ಕರಿಸ ಲಾಗಿದೆ. ಅಧಿಕಾರಿಗಳ ಕ್ರಮವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿಯ ಸ್ವಾಗತಿಸುತ್ತಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ.

ಇಂದು ಪ್ರತಿಭಟನೆ ?:

ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆಗೆ ಕಸಸಂಗ್ರಹಣೆಯ ಶುಲ್ಕವನ್ನು ವಸೂಲಿ ಮಾಡುವ ಪ್ರಸ್ತಾಪ ಬಗ್ಗೆ ಹಾಗೂ ಪುರಸಭೆಯ ಈ ಜನವಿರೋಧಿ ನೀತಿಯ ವಿರುದ್ಧ ಜು. 23ರಂದು ಬೆಳಿಗ್ಗೆ 10.30ಕ್ಕೆ ಬಂಟ್ವಾಳದ ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು ಪುರಸಭಾ ಆಡಳಿತ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News