ಜು.25-31: ಶಕ್ತಿನಗರದಲ್ಲಿ ತುಳು ಪ್ರವಚನ ಸಪ್ತಾಹ

Update: 2019-07-22 16:52 GMT

ಮಂಗಳೂರು, ಜು.22: ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕತೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಪ್ರತಿಮನೆಯಲ್ಲೂ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇಂದು ಕೂಡ ಹಲವು ಕಡೆ ಈ ಸಂಸ್ಕೃತಿಯು ನಡೆದುಕೊಂಡು ಬರುತ್ತಿದೆ. ಆದರೆ ತುಳು ಭಾಷೆಯ ಪಾರಾಯಣ ಯಾವುದೇ ಕಡೆ ನಡೆಯುತ್ತಿಲ್ಲ. ತುಳುವ ವಾಲ್ಮೀಕಿ ಎಂದೇ ಹೆಸರು ಪಡೆದ ಮಂದಾರ ಕೇಶವ ಭಟ್ ಬರೆದ ಮಂದಾರ ರಾಮಾಯಣ ಮಹಾಕಾವ್ಯಗಳಲ್ಲಿ ಒಂದಾಗಿದೆ. ಇದನ್ನು ನಾಡಿನಾದ್ಯಂತ ಪ್ರಸರಿಸಬೇಕು ಎಂಬ ಧ್ಯೇಯದಿಂದ ಅವರ ನೂರ ಒಂದನೇ ಜನ್ಮದಿನಾಚರಣೆ ಸಂದರ್ಭ ವಿಶೇಷ ಗೌರವ ನೀಡಬೇಕೆಂಬ ಉದ್ದೇಶದಿಂದ ಜು.25ರಿಂದ 31ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ತುಳುವೆರೆ ಚಾವಡಿ ಶಕ್ತಿನಗರದಲ್ಲಿ ‘ಏಳದೆ ಮಂದಾರ ರಾಮಾಯಣ-ಸುಗಿಪು ದುನಿಪು’ ಎಂಬ ತುಳು ಪ್ರವಚನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News