ಬಂಟ್ವಾಳದಲ್ಲಿ ತೀವ್ರ ಮಳೆ: ವಿವಿಧೆಡೆ 5 ಮನೆಗಳಿಗೆ ಹಾನಿ
Update: 2019-07-22 22:38 IST
ಬಂಟ್ವಾಳ, ಜು. 22: ಸೋಮವಾರವೂ ಬಂಟ್ವಾಳ ತಾಲೂಕಿನಲ್ಲಿ ತೀವ್ರಗಾಳಿಯಿಂದ ಕೂಡಿದ ಮಳೆಯಾಗಿದ್ದು, ವಿವಿಧೆಡೆಯಲ್ಲಿ ಒಟ್ಟು 5 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿವೆ.
ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಅಬೂಬಕರ್ ಎಂಬವರ ಮನೆಯ ಆವರಣಗೋಡೆ ಕುಸಿದಿದೆ. ವಿಟ್ಲ ಕಸಬಾಗ್ರಾಮದ ಪಾರ್ವತಿ ಮನೆಯ ಛಾವಣಿ ಕುಸಿದು 40 ಸಾವಿರ ರೂ. ನಷ್ಟ ಸಂಭವಿಸಿದೆ. ವಿಟ್ಲ ಕಸಬಾದ ಸಿಂಥಿಯಾ ಮನೆ ಆವರಣ ಗೋಡೆ ಕುಸಿದಿದ್ದರೆ, ಅನಂತಾಡಿ ಗ್ರಾಮದ ಕೇಶವ ಪೂಜಾರಿ ಎಂಬವರ ಕೊಟ್ಟಿಗೆ ಹಾನಿಯಾಗಿದೆ. ಸಜೀಪಮುನ್ನೂರು ಗ್ರಾಮದ ಕಮಲಾ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ರವಿವಾರ 5.8 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರಿನ ಮಟ್ಟವು ರವಿವಾರ ಕೊಂಚ ಏರಿಕೆಯಾಗಿದ್ದು,ಸಂಜೆ ವೇಳೆ 5.9 ಮೀಟರ್ ಮಟ್ಟದಲ್ಲಿ ಹರಿಯುತ್ತಿತ್ತು.