ಮಂಗಳೂರು: ಮಟ್ಕಾ ಆಡುತ್ತಿದ್ದ 10 ಮಂದಿ ಆರೋಪಿಗಳ ಬಂಧನ

Update: 2019-07-22 17:30 GMT

ಮಂಗಳೂರು, ಜು.22: ಬಂದರ್ ಸಮೀಪದ ಕಾಂಪ್ಲೆಕ್ಸ್‌ವೊಂದರ ಬಳಿ ಮಟ್ಕಾ ಆಡುತ್ತಿದ್ದ 10 ಆರೋಪಿಗಳನ್ನು ಸೋಮವಾರ ರಾತ್ರಿ 9 ಗಂಟೆ ಸುಮಾರು ಮಂಗಳೂರು ಉತ್ತರ (ಬಂದರ್) ಪೊಲೀಸರು ಬಂಧಿಸಿದ್ದಾರೆ.

ಯಶವಂತ್, ಮುಹಮ್ಮದ್ ರಫೀಕ್, ಬಸವರಾಜು, ಎಂ.ಸತೀಶ್ ಕಾಮತ್, ಹರೀಶ್‌ಚಂದ್ರ, ಶಂಕರ್, ಅನ್ವರ್ ಹುಸೈನ್, ಅಬ್ದುಲ್ ರಹೀಂ, ರಾಜೇಶ್ ಮಲ್ಯ, ಎಂ.ರಫೀಕ್ ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಬಂದರ್ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 29,500 ರೂ. ನಗದು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News