ಪ್ರೊ. ಬಿ.ಇಂ. ಇಚ್ಲಂಗೋಡುರವರ ಬ್ಯಾರಿ ವ್ಯಾಕರಣ ಪುಸ್ತಕ ಲೋಕಾರ್ಪಣೆ

Update: 2019-07-23 09:54 GMT

ಮಂಗಳೂರು, ಜು.23: ಹಿರಿಯ ಸಂಶೋಧಕ ಪ್ರೊ. ಬಿ.ಎಂ. ಇಚ್ಲಂಗೋಡು ಅವರ ಪ್ರಥಮ ಬ್ಯಾರಿ ವ್ಯಾಕರಣ ಪುಸ್ತಕವನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಮುಹವ್ಮುದ್ ಹನೀಫ್ ಬಿಡುಗಡೆಗೊಳಿಸಿದರು.

ಅವರು ಮಾತನಾಡಿ, ಗ್ರಾಂಥಿಕವಾಗಿ ಬ್ಯಾರಿ ಭಾಷೆ ಬೆಳೆಯಲು ವ್ಯಾಕರಣ ಸಹಕಾರಿ. ಮಾತ್ರವಲ್ಲದೆ ಭಾಷೆಗಳನ್ನು ಶಾಸ್ತ್ರೀಯವಾಗಿ ಉಚ್ಚರಿಸಲು ಹಾಗೂ ಬರೆಯಲು ವ್ಯಾಕರಣ ಅಗತ್ಯ ಎಂದರು.

ಬ್ಯಾರಿ ಭಾಷೆಯಲ್ಲಿ ಕೆಲವು ಪದಗಳಿಗೆ ಸಮಾನಾರ್ಥಕ ಪದಗಳಿಲ್ಲ. ಕೆಲವೊಂದು ಅರೆಬಿಕ್ ಭಾಷೆಯ ಪದಗಳನ್ನು ಬಳಸಿಕೊಂಡು ಪ್ರೊ. ಇಚ್ಲಂಗೋಡುರವರು ಬ್ಯಾರಿ ಭಾಷೆ ಪದ ಪ್ರಯೋಗಕ್ಕೆ ಅಗತ್ಯವಾದ ವ್ಯಾಕರಣವನ್ನು ಈ ಪುಸ್ತದ ಮೂಲಕ ಒದಗಿಸಿದ್ದಾರೆ ಎಂದರು.

ಈ ಹಿಂದೆ ಬ್ಯಾರಿ ನಿಘಂಟು ಹೊರತಂದ ಸಂದರ್ಭ ವ್ಯಾಕರಣದ ಅಗತ್ಯ ಕಂಡು ಅದನ್ನು ಇಂದು ಪುಸ್ತಕ ಮೂಲಕ ಹೊರತರಲಾಗಿದೆ. ಕೆಲವು ಕಡೆ ಬ್ಯಾರಿ ಪದಗಳನ್ನು ಉಪಯೋಗಿಸಲು ಆಗದಿದ್ದಲ್ಲಿ ಅರೆಬಿಕ್ ಪದಗಳನ್ನು ಉಪಯೋಗಿಸಿದ್ದೇನೆ ಎಂದು ಕೃತಿಕಾರ ಪ್ರೊ. ಬಿ.ಎಂ. ಇಚ್ಲಂಗೋಡು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ಯಾರಿ ಸಾಹಿತಿ ಬಿ.ಎ. ಸಂಶುದ್ದೀನ್ ಮಡಿಕೇರಿ, ಕನ್ನಡ ಸಂಘದ ಕಾರ್ಯದರ್ಶಿ ಜೀವನ್ ಮತ್ತು ಹ್ಯಾರಿಸ್ ಇಚ್ಲಂಗೋಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News