ಬರಾಕ್ ಇನ್ಟಿಟ್ಯೂಟ್ : 'ಟಾಪ್ ಪರ್ಫಾರ್ಮಿಂಗ್ ಸ್ಕೂಲ್ ಅವಾರ್ಡ್ 2019' ಪ್ರಶಸ್ತಿ

Update: 2019-07-23 11:05 GMT

ಮಂಗಳೂರು: ಬರಾಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು “ಟಾಪ್ ಪರ್ಫಾರ್ಮಿಂಗ್ ಸ್ಕೂಲ್ ಅವಾರ್ಡ್ 2019” ಅನ್ನು ಪಡೆದಿದೆ.

ಮಕ್ಕಳ ಸಮಗ್ರ ಬೆಳವಣಿಗೆಗೆ, ಆದರ್ಶಪ್ರಾಯವಾದ ಕೊಡುಗೆಗಾಗಿ ಅಡ್ಯಾರ್‌ನ ಬರಾಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜನ್ನು “ಟಾಪ್ ಪರ್ಫಾರ್ಮಿಂಗ್ ಸ್ಕೂಲ್ ಅವಾರ್ಡ್ 2019” ಗೆ ಆಯ್ಕೆ ಮಾಡಿರುವುದು ಬರಾಕೈಟ್‌ಗಳಿಗೆ ದೊರೆತ ದೊಡ್ಡ ಗೌರವ ಮತ್ತು ಹೆಮ್ಮೆ ಎಂದು  ಬರಾಕಾದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಅವರು ತಿಳಿಸಿದ್ದು, ಅವರಿಗೆ “ಪ್ರಗತಿಶೀಲ ಶಾಲಾ ಮಾಲಿಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭ ಭಾರತದಾದ್ಯಂತದ ಪ್ರಾಂಶುಪಾಲರು, ಶಿಕ್ಷಣ ಮುಖಂಡರು ಮತ್ತು ತರಬೇತುದಾರರು, ಪ್ರಾದೇಶಿಕ ಸಿಬಿಎಸ್‌ಇ ಅಧಿಕಾರಿ, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News