ಹಿರಿಯಡಕ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

Update: 2019-07-23 12:53 GMT

ಉಡುಪಿ, ಜು.23: ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನ ವನ್ನು ಅಧ್ಯಯನಶೀಲತೆಯ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಸಾಪಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ ನೂತನ ಸಮಾಜ ಸೇವಾ ಸಂಸ್ಥೆ ಸಾಪಲ್ಯ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿರುವ ಆಧುನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಪಲ್ಯ ಟ್ರಸ್ಟ್‌ನ ಕಾರ್ಯದರ್ಶಿ ಇಂದೂ ರಮಾನಂದ ಭಟ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಜೊತೆಗೆ ಮಾನವೀಯ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸಾಪಲ್ಯ ಟ್ರಸ್ಟ್‌ನ ಸದಸ್ಯೆ ಡಾ.ಅಮೀನಾ ಮಾತನಾಡಿ, ಸಮಾಜವು ನಮ್ಮನ್ನು ಗುರುತಿಸುವಂತಹ ಸಾಧನೆಯನ್ನು ಮಾಡುವ ಮಹತ್ವಾ ಕಾಂಕ್ಷೆಯನ್ನು ವಿದ್ಯಾರ್ಥಿ ಸಮೂಹ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಪಲ್ಯ ಟ್ರಸ್ಟ್‌ನ ಸಮಾಜ ಸೇವಾ ಕಾರ್ಯವು ವಿದ್ಯಾರ್ಥಿಗಳಿಗೆಲ್ಲ ಮಾದರಿ ಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮತ್ತು ಸಾಪಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಸಾಪಲ್ಯ ಟ್ರಸ್ಟ್‌ನ ಕೋಶಾಧಿಕಾರಿ ಮಮತಾ ದಿವಾಕರ್ ಶೆಟ್ಟಿ, ಸದಸ್ಯರಾದ ಹರಿಣಿ, ಅನುರಿತಾ, ಶೈಲಶ್ರೀ, ಪ್ರಿಯಾ ರಾಮದಾಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ. ಉಪಸ್ಥಿತರಿದ್ದರು. ಸುಜಯಾ ಕೆ. ಸ್ವಾಗತಿಸಿ, ಸುಮನಾ ಬಿ. ವಂದಿಸಿದರು. ಸುಬಾಷ್ ಎಚ್.ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News