​ಹಿರಿಯ ಬ್ಯಾರಿ ಕಲಾವಿದ, ಸಾಹಿತಿ ಟಿ.ಇಬ್ರಾಹೀಂ ತಣ್ಣೀರುಬಾವಿ ನಿಧನ

Update: 2019-07-23 14:46 GMT

ಮಂಗಳೂರು, ಜು. 23: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ, ಹಿರಿಯ ​ಬ್ಯಾರಿ ಕಲಾವಿದ ಟಿ. ಇಬ್ರಾಹೀಂ ತಣ್ಣೀರುಬಾವಿ (82) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.

ಮೂಲತಃ ತಣ್ಣೀರುಬಾವಿ, ಪ್ರಸ್ತುತ ಕೃಷ್ಣಾಪುರ ನಿವಾಸಿ, ಹೆಸರಾಂತ ಸಾಹಿತಿ ಟಿ. ಇಬ್ರಾಹೀಂ ತಣ್ಣೀರುಬಾವಿ ಅವರು ಎರಡು ಬ್ಯಾರಿ ಕವನ ಸಂಕಲನಗಳನ್ನು ರಚಿಸಿದ್ದರು.

ಸಂದೋಲ, ಮಹ್ರ್, ದಫ್ ಹಾಡು ಸೇರಿದಂತೆ 10ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಇಬ್ರಾಹೀಂ ಅವರು ‘ಸಾವುಞಾಕರೊ ಶಾಲೆ’ ಎನ್ನುವ ಬ್ಯಾರಿ ನಾಟಕವನ್ನು ರಚಿಸಿದ್ದಾರೆ. ಅಲ್ಲದೆ, ಹಲವು ತುಳು ನಾಟಕಗಳನ್ನು ರಚನೆ ಮಾಡಿದ್ದಾರೆ.

ಮೃತರು ಪತ್ನಿ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News