ಮಲಮಗಳು ಲಪಟಾಯಿಸಿದ ಆಸ್ತಿ ಹಿಂಪಡೆದ ಮೇರಿ ಡಿಸೋಜ

Update: 2019-07-23 15:06 GMT

ಉಡುಪಿ, ಜು.23: ಇಟಲಿ ಸಂಜಾತೆ ಜೂಲಿಯ ಡಿಸೋಜ ಎಂಬಾಕೆ ಉಡುಪಿ ಪುತ್ತೂರು ಗ್ರಾಮದ ತನ್ನ ಮಲ ತಾಯಿ ಮೇರಿ ಡಿಸೋಜ ಎಂಬ ವೃದ್ಧೆಗೆ ಸೇರಿದ ಆಸ್ತಿಯನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿರುವ ಉಡುಪಿ ಜಿಲ್ಲಾ ಹಿರಿಯ ನಾಗರಿಕರ ನ್ಯಾಯ ನಿರ್ವಾಹಣಾ ಮಂಡಳಿ, ಜೂಲಿಯಾ ತನ್ನ ಹೆಸರಿಗೆ ವರ್ಗಾಯಿಸಿದ ಆಸ್ತಿಯ ನೋಂದಾವಣೆ ಯನ್ನು ರದ್ದುಗೊಳಿಸಿದೆ.

ಈ ಆದೇಶದಲ್ಲಿ ಈ ಜಮೀನಿನಲ್ಲಿರುವ ಅಂಗಡಿಗಳ ಮಾಲಕರು ಬಾಡಿಗೆ ಯನ್ನು ಇನ್ನು ಮುಂದೆ ಆಸ್ತಿಯ ಮಾಲಕಿ ಮೇರಿ ಡಿಸೋಜರಿಗೆ ನೀಡಬೇಕೆಂಬು ದಾಗಿ ಸೂಚಿಸಲಾಗಿದೆಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಬಾಗ್ ಇಂದು ಕುಂಜಿಬೆಟ್ಟು ಕಾನೂನು ವಿದ್ಯಾಲಯದಲ್ಲಿ ರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲ್ಯಾಣಪುರ ಸಂತೆಕಟ್ಟೆಯ ನಿವಾಸಿ ವಿಜಿಲ್ ಡಿಸೋಜ ಹಲವು ವರ್ಷಗಳ ಕಾಲ ಇಟೆಲಿಯಲ್ಲಿ ದುಡಿದು, ನಂತರ ಇಟಲಿ ಹಾಗೂ ಊರಿನಲ್ಲಿ ವಿವಿಧ ಸ್ಥಿರಾಸ್ತಿಗಳನ್ನು ಮಾಡಿದ್ದರು. ತನ್ನ ಮೊದಲನೆ ಪತ್ನಿ ತೆರೆಸಾ ಡಿಸೋಜಳ ಮರಣಾ ನಂತರ ಊರಿಗೆ ಮರಳಿದ ವಿಜಿಲ್ ಡಿಸೋಜ 1998ರಲ್ಲಿ ಮೇರಿ ಡಿಸೋಜ ರನ್ನು ಎರಡನೇ ಪತ್ನಿಯನ್ನಾಗಿ ಸ್ವೀರಿಸಿದ್ದರು.

ಇಟಲಿಯಲ್ಲಿಯೇ ಹುಟ್ಟಿ ಬೆಳೆದ ಮೊದಲನೆಯ ಪತ್ನಿಯ ಮಗಳು ಜೂಲಿಯಾ ಇಟಲಿ ನಾಗರಿಕಳಾಗಿ ಅಲ್ಲಿಯೇ ವಾಸವಾಗಿದ್ದಳು. 2010ರಲ್ಲಿ ವಿಜಿಲ್ ಡಿಸೋಜ ತನ್ನ ಪುತ್ತೂರು ಗ್ರಾಮದ 0.87 ಎಕ್ರೆ ಜಮೀನು, ಅದರಲ್ಲಿ ರುವ 4 ಮನೆ ಹಾಗೂ ಬಾಡಿಗೆಗೆ ಹಾಕಿರುವ ಎಂಟು ಅಂಗಡಿಗಳನ್ನು ಪತ್ನಿ ಮೇರಿ ಡಿಸೋಜರ ಹೆಸರಿಗೆ ವರ್ಗಾಯಿಸಿದ್ದರು. ಮೂರು ವರ್ಷಗಳ ಬಳಿಕ 2013ರ ಮೇ ತಿಂಗಳಲ್ಲಿ ವಿಜಿಲ್ ಡಿಸೋಜ ಮರಣಹೊಂದಿದ್ದರು.

ವಿಜಿಲ್ ಡಿಸೋಜರ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಬಂದಿದ್ದ ಜೂಲಿಯಾ, ಜೋವಿಟಾ ಎಂಬವಳೊಂದಿಗೆ ಸೇರಿ ಗಂಡ ತೀರಿ ಹೋದ ನೋವಿನಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದ ಮೇರಿ ಡಿಸೋಜರ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರ ಎಲ್ಲ ಆಸ್ತಿಯಲ್ಲಿ ಜೂಲಿಯಾ ಹಕ್ಕು ಚಲಾಯಿಸಿದರು. ಈ ಬಗ್ಗೆ ಮೇರಿ ಡಿಸೋಜ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ.

2018ರಲ್ಲಿ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿಗೆ ಮೇರಿ ಡಿಸೋಜ ದೂರು ನೀಡಿದರು. ದೂರು ಸ್ವೀಕರಿಸಿದ ಹಿರಿಯ ನಾಗರಿಕ ನ್ಯಾಯ ನಿರ್ವಹಣಾ ಮಂಡಳಿಯ ಅಧ್ಯಕ್ಷ ಡಾ.ಮಧುಕೇಶ್ವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದಲ್ಲದೆ ವಿವಾದಿತ ಸ್ಥಳ್ಕೂ ಭೇಟಿ ನೀಡಿ ತನಿಖೆ ನಡೆಸಿದ್ದರು.

ನಂತರ ಅವರು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಉಪನೋಂದಣಾಧಿಕಾರಿ ಯವರು ಮಾಡಿದ ದಸ್ತಾವೇಜು ನೋಂದಣಿಯನ್ನು ಅಕೃತ ಮತ್ತು ಶೂನ್ಯ ಎಂದು ಜೂಲಿಯಾಳ ಹೆಸರಿಗೆ ವರ್ಗಾವಣೆಯಾದ ಆಸ್ತಿಯನ್ನು ಮೇರಿ ಡಿಸೋಜರ ಹೆರಿನಲ್ಲಿ ಪುನರ್ ದಾಖಲಿಸಲು ಉಪ ನೋಂದಣಾಧಿಕಾರಿ ಹಾಗೂ ಉಡುಪಿ ತಹಶಿಲ್ದಾರರಿಗೆ ಅದೇಶ ನೀಡಿದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೇರಿ ಡಿಸೋಜ, ನಿವೃತ್ತ ತಹಶೀಲ್ದಾರ್ ಮುರಳೀಧರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News