ತಿಯನಾನ್ಮೆನ್ ದಾಳಿಯ ರೂವಾರಿ, ಚೀನಾ ಪ್ರಧಾನಿ ನಿಧನ

Update: 2019-07-23 15:22 GMT

ಬೀಜಿಂಗ್, ಜು. 23: ಚೀನಾದ ಮಾಜಿ ಪ್ರಧಾನಿ ಲಿ ಪೆಂಗ್ ನಿಧನರಾಗಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ಮಂಗಳವಾರ ವರದಿ ಮಾಡಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

 ತಿಯನಾನ್ಮೆನ್ ಚೌಕದಲ್ಲಿ ನಡೆಸಿದ ನರಮೇಧದಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ‘ಬೀಜಿಂಗ್‌ನ ಕಟುಕ’ ಎಂಬುದಾಗಿ ಅವರು ಗುರುತಿಸಿಕೊಂಡಿದ್ದರು.

ಅವರು ಮೂತ್ರಪಿಂಡದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಬೀಜಿಂಗ್‌ನ ತಿಯನಾನ್ಮೆನ್ ಚೌಕದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಬೃಹತ್ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸೇನಾ ಟ್ಯಾಂಕ್‌ಗಳನ್ನು ಹರಿಸಿದ ರೂವಾರಿ ಎಂಬುದಾಗಿಯೇ ಅವರು ಜಗತ್ತಿಗೆ ಪರಿಚಿತರಾಗಿದ್ದಾರೆ.

1989 ಜೂನ್ 3 ಮತ್ತು 4ರ ರಾತ್ರಿ ಸೇನೆಯು ಧರಣಿ ನಿರತರ ಮೇಲೆ ದಾಳಿ ನಡೆಸಿ ಧರಣಿಯನ್ನು ನಿಲ್ಲಿಸಿತು. ಸೇನೆಯ ದಮನ ಕಾರ್ಯಾಚರಣೆಯಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News