ಕೊಮೊಡೊ ಡ್ರಾಗನ್ ರಕ್ಷಣೆಗಾಗಿ ದ್ವೀಪ ಬಂದ್: ಇಂಡೋನೇಶ್ಯ

Update: 2019-07-23 15:26 GMT

ಜಕಾರ್ತ (ಇಂಡೋನೇಶ್ಯ), ಜು. 23: ಅಪರೂಪದ ಕೊಮೊಡೊ ಡ್ರಾಗನ್‌ಗಳನ್ನು ರಕ್ಷಿಸುವುದಕ್ಕಾಗಿ ಪೂರ್ವದ ದ್ವೀಪ ಕೊಮೊಡೊವನ್ನು ಮುಂದಿನ ವರ್ಷ ಸಾರ್ವಜನಿಕರಿಗೆ ಮುಚ್ಚಲು ಇಂಡೋನೇಶ್ಯ ನಿರ್ಧರಿಸಿದೆ ಎಂದು ಪ್ರಾಂತೀಯ ಸರಕಾರದ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಕೊಮೊಡೊ ಡ್ರಾಗನ್‌ಗಳು ಬದುಕಿರುವ ಅತಿ ದೊಡ್ಡ ಹಲ್ಲಿ ಪ್ರಭೇದವಾಗಿದೆ.

ಈ ದ್ವೀಪವು ಕೊಮೊಡೊ ನ್ಯಾಶನಲ್ ಪಾರ್ಕ್‌ನ ಭಾಗವಾಗಿದೆ. ಅಲ್ಲಿಗೆ 2018ರಲ್ಲಿ ಜಗತ್ತಿನೆಲ್ಲೆಡೆಯಿಂದ 1,76,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News