ಒಂದೇ ವಾರದಲ್ಲಿ ಅಫ್ಘಾನ್ ಯುದ್ಧ ಗೆಲ್ಲಬಹುದು, ಆದರೆ..: ಟ್ರಂಪ್ ಹೇಳಿದ್ದು ಹೀಗೆ

Update: 2019-07-23 16:38 GMT

ವಾಶಿಂಗ್ಟನ್, ಜು. 23: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನದ ನೆರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಶಂಸಿಸಿದ್ದಾರೆ.

ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾತನಾಡುತ್ತಿದ್ದರು.

''ಬಲ ಪ್ರಯೋಗದ ಮೂಲಕ ಕೇವಲ ಕೆಲವೇ ದಿನಗಳಲ್ಲಿ ನಾನು ಅಫ್ಘಾನಿಸ್ತಾನದ ಸಂಘರ್ಷವನ್ನು ಕೊನೆಗೊಳಿಸಬಲ್ಲೆ ಹಾಗೂ ಅಫ್ಘಾನಿಸ್ತಾನವು ಭೂಮಿಯಿಂದ ಅಳಿಸಿ ಹೋಗುವುದು. ಆದರೆ, ನಾನು ಮಾತುಕತೆಯನ್ನು ಬಯಸುತ್ತೇನೆ'' ಎಂದು ಟ್ರಂಪ್ ಹೇಳಿದರು.

1990ರ ದಶಕದಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗ ನೆರೆಯ ಪಾಕಿಸ್ತಾನ ಅದರ ಪ್ರಮುಖ ಪ್ರಾಯೋಜಕನಾಗಿತ್ತು.

 2001ರಲ್ಲಿ ಅಮೆರಿಕ ನೇತೃತ್ವದ ಸೇನೆಯು ತಾಲಿಬಾನನ್ನು ಅಧಿಕಾರದಿಂದ ಹೊರಗಟ್ಟಿದ ಬಳಿಕ ಅದು ಭಯೋತ್ಪಾದನೆ ಚಟುವಟಿಕೆಗಳಲ್ಲಿ ನಿರತವಾಗಿದೆ. ತಾಲಿಬಾನ್ ಮೇಲೆ ಪಾಕಿಸ್ತಾನ ಹೊಂದಿರುವ ಪ್ರಭಾವದ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನದಲ್ಲಿನ ಹಿಂಸೆಯನ್ನು ಹೋಗಲಾಡಿಸುವಲ್ಲಿ ಪಾಕಿಸ್ತಾನದ ಮಹತ್ವದ ಪಾತ್ರವನ್ನು ವಹಿಸಬಹುದಾಗಿದೆ.

''ಅಫ್ಘಾನಿಸ್ತಾನದಲ್ಲಿ ನಾವು ಯುದ್ಧ ಬಯಸಿದ್ದರೆ ಹಾಗೂ ಅದನ್ನು ಗೆಲ್ಲಲು ಬಯಸಿದ್ದರೆ, ನಾನು ಆ ಯುದ್ಧವನ್ನು ಒಂದೇ ವಾರದಲ್ಲಿ ಗೆಲ್ಲುತ್ತೇನೆ. ಆದರೆ, ನಾನು ಒಂದು ಕೋಟಿ ಜನರನ್ನು ಕೊಲ್ಲಲು ಬಯಸುವುದಿಲ್ಲ'' ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News