ಆನ್‌ಲೈನ್ ಖರೀದಿ: ಖಾತೆಯಿಂದ ಹಣ ವಂಚನೆ
ಉಡುಪಿ, ಜು.23: ಆನ್‌ಲೈನ್ ಖರೀದಿ ಸಂಬಂಧ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಕುಂಜಾಲು ನಿವಾಸಿ ದಿನೇಶ ದೇವಳಿ ಎಂಬವರ ಮಗ ಅನಿರುದ್ಧ ಎಂಬಾತ ಜು.14ರಂದು ಇಮೇಲ್ ನೆಟ್‌ನಿಂದ ಬ್ಲೂಟೂತ್ ಸ್ಪೀಕರ್ ಖರೀದಿಸಲು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು, ಜು.21ರಂದು 1,799ರೂ. ನೀಡಿ ಪಾರ್ಸೆಲ್ ಸ್ವೀಕರಿಸಿದ್ದರು. ಆದರೆ ಡೆಲಿವರಿ ಆದ ಪಾರ್ಸೆಲ್ ನೋಡಿದಾಗ ಬೇರೆ ಯಾವುದೋ ಕಂಪನಿಯ ಸ್ಪೀಕರ್ ಬಂದಿತ್ತು.
ಈ ಬಗ್ಗೆ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ತಪ್ಪಾಗಿದೆ ಹಣ ವಾಪಾಸ್ಸು ಮಾಡುವುದಾಗಿ ಹೇಳಿ ದಿನೇಶ್ ದೇವಳಿಯ ಮೊಬೈಲಿಗೆ ಒಂದು ಸಂದೇಶ ಕಳುಹಿಸಲಾಗಿತ್ತು. ಅದನ್ನು ಇನ್ನೊಂದು ಮೊಬೈಲ್ ನಂಬರ್‌ಗೆ ಫಾರ್ವಡ್ ಮಾಡಲು ತಿಳಿಸಿದ್ದು, ಹಾಗೆ ಮಾಡಿದ ಕೂಡಲೇ ದಿನೇಶ ದೇವಳಿಯ ಎಸ್‌ಬಿಐ ಖಾತೆಯಿಂದ 4 ಬಾರಿ 87,998ರೂ. ಮೊತ್ತವು ಖಾತೆಗೆ ಪೇಟಿಎಂ ಆನ್ ಲೈನ್ ಮೂಲಕ ವರ್ಗಾಯಿಸಿ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸ ಲಾಗಿದೆ.