ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಓರ್ವನ ಬಂಧನ

Update: 2019-07-23 17:51 GMT

ಪುತ್ತೂರು: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.

ಕಬಕ ಗ್ರಾಮದ ಪಲ್‍ನೀರ್‍ಕಟ್ಟೆ ನಿವಾಸಿ ಮಹಮ್ಮದ್ ರಫೀಕ್ ಯಾನೆ ಗುಜುರಿ ಮುನ್ನ(39) ಬಂಧಿತರ ಆರೋಪಿ.

ಆರೋಪಿ ಬಳಿಯಿದ್ದ ಒಟ್ಟು ರೂ. 57,650 ಮೌಲ್ಯದ 150 ಗ್ರಾಂ ತೂಕ ಗಾಂಜಾವನ್ನೊಳಗೊಂಡ 29 ಪ್ಯಾಕೆಟ್‍ಗಳು ಮತ್ತು ಆಕ್ಟೀವಾ ಸ್ಕೂಟರ್ , ಒಂದು ಮೊಬೈಲ್ ಹಾಗೂ ನಗದು ರೂ. 650 ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಮುರ ರೈಲ್ವೆ ಓವರ್ ಬ್ರಿಡ್ಜ್ ಬಳಿಯಲ್ಲಿ ರಸ್ತೆ ಬದಿಯಲ್ಲಿ ತನ್ನ ಸ್ಕೂಟರ್‍ನೊಂದಿಗೆ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ಸುತ್ತುವರಿದು ವಿಚಾರಣೆ ನಡೆಸಿದಾಗ ತಾನು ಗಾಂಜಾ ಮಾರಾಟಕ್ಕೆಂದು ಬಂದಿರುವುದಾಗಿ ಸ್ಕೂಟರ್‍ನ ಸೀಟ್ ಅಡಿಯಲ್ಲಿನ ಬಾಕ್ಸ್ ನಲ್ಲಿದ್ದ ಗಾಂಜಾವನ್ನು ತೋರಿಸಿದ ವೇಳೆ ಗಾಂಜಾ ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News