ಸುಳ್ಯ: ಅನ್ಸಾರಿಯಾ ಎಸ್.ಬಿ.ಎಸ್ ನೂತನ ಪದಾಧಿಕಾರಿಗಳ ಆಯ್ಕೆ

Update: 2019-07-24 12:51 GMT

ಸುಳ್ಯ:  ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನದಲ್ಲಿರುವ ಅನ್ಸಾರಿಯಾ ಅರೆಬಿಕ್ ಸ್ಕೂಲ್ ಇದರ 2019-20ರ ಸಾಲಿನ ಎಸ್ ಬಿ ಎಸ್ ನೂತನ ಸಾರಥಿಗಳ ಆಯ್ಕೆ ಹಾಗೂ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು.

ಸದರ್ ಮುಅಲ್ಲಿಂ ಝುಬೈರ್ ಹಿಮಮಿ ಪರಪ್ಪು ಅಧ್ಯಕ್ಷತೆಯಲ್ಲಿ, ಖತೀಬ್ ಉಮರ್ ಮುಸ್ಲಿಯಾರ್ ಮರ್ದಾಳ ಪ್ರಾರ್ಥಿಸಿ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಅನಿವಾರ್ಯತೆಯ ಕುರಿತು ಮಾತನಾಡಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷರಾಗಿ ಮುಬಶ್ಶಿರ್ ಅಲೆಕ್ಕಾಡಿ, ಕಾರ್ಯದರ್ಶಿಯಾಗಿ ಸುಹೈಲ್ ಕೊಡಿಂಬಾಳ, ಕೋಶಾಧಿಕಾರಿಯಾಗಿ ಉನೈಸ್ ಕೊಡಿಂಬಾಳ ಆಯ್ಕೆಯಾದರು. ಈ ಸಂದರ್ಭ ಅನ್ಸಾರಿಯಾ ಸಂಸ್ಥೆಯ ಜನರಲ್ ಮ್ಯಾನೇಜರ್ ಉವೈಸ್ ಬೀಟಿಗೆ, ಮದರಸ ಅಧ್ಯಾಪಕರಾದ ಯಾಕೂಬ್ ಮುಸ್ಲಿಯಾರ್ ಸವಣಾಲು, ನೌಶಾದ್ ಮದನಿ ಮುಡಿಪ್ಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News