×
Ad

ಉಡುಪಿ: ನಾ.ಮೊಗಸಾಲೆ ಸಾಹಿತ್ಯ ವಿಹಾರ ಕಾರ್ಯಕ್ರಮ

Update: 2019-07-24 18:50 IST

ಉಡುಪಿ, ಜು.24: ಎಂಜಿಎಂ ಕಾಲೇಜಿನ ಕನ್ನಡ ವಿಭಾಗವು ಕಾಂತಾವರದ ಮೊಗಸಾಲೆ 75 ಅಭಿನಂದನ ಸಮಿತಿಯ ಸಹಯೋಗದೊಂದಿಗೆ ಖ್ಯಾತ ಕಾದಂಬರಿಕಾರ ಡಾ.ನಾ.ಮೊಗಸಾಲೆ ಅವರ ಸಾಹಿತ್ಯ ವಿಹಾರ ಕಾರ್ಯಕ್ರಮ ವೊಂದನ್ನು ಜು.25ರ ಗುರುವಾರ ಅಪರಾಹ್ನ 2:00ರಿಂದ ಸಂಜೆ 4:00ರವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ.

ಖ್ಯಾತ ಲೇಖಕ, ವಿದ್ವಾಂಸ ಡಾ.ಎನ್.ಟಿ.ಭಟ್ ಅವರು ‘ಮೊಗಸಾಲೆಯವರ ಮುಖಾಂತರ’ ಹಾಗೂ ಸಾಹಿತಿ ಅಂಶುಮಾಲಿ ‘ವಾಮನನಿಂದ ತ್ರಿವಿಕ್ರಮ: ಮೊಗಸಾಲೆ’ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ನಾ. ಮೊಗಸಾಲೆ ಅವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News