ಕೈರಂಗಳ: ‘ನಮ್ಮ ಮನೆ ಸ್ವಚ್ಛ ಮನೆ’ ಅಭಿಯಾನಕ್ಕೆ ಚಾಲನೆ

Update: 2019-07-24 13:27 GMT

ಮುಡಿಪು, ಜು.24: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಕೈರಂಗಳ 2ನೇ ವಾರ್ಡ್‌ನ ಪ್ರಥಮ ಸುತ್ತಿನ ವಾರ್ಡ್ ಸಭೆಯು ಡಿ.ಜಿಕಟ್ಟೆ ಯುವಕ ಮಂಡಲ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಈ ಸಭೆಯಲ್ಲಿ ‘ನಮ್ಮ ಮನೆ ಸ್ವಚ್ಛ ಮನೆ-ನಮ್ಮ ವಾರ್ಡ್ ಸ್ವಚ್ಛ ವಾರ್ಡ್’ ಅರಿವಿನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಗ್ರಾಪಂ ಸದಸ್ಯ ಜನಾರ್ದನ್ ಕುಲಾಲ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಚ್ಛ ಮನೆ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದ ತಾಪಂ ಸದಸ್ಯ ಹೈದರ್ ಕೈರಂಗಳ ‘ನಮ್ಮ ಮನೆ ಸ್ವಚ್ಛ ಮನೆ ಅರಿವಿನ ಅಭಿಯಾನಕ್ಕೆ ಚಾಲನೆ ನೀಡಿ ಗೃಹ ಸ್ವಚ್ಛತೆಯೊಂದಿಗೆ ವಾರ್ಡ್ ಹಾಗೂ ಗ್ರಾಮದ ಸಂಪೂರ್ಣ ಸ್ವಚ್ಛತೆಗೆ ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಸುವ ಅಭ್ಯಾಸವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವೆಂದರು.

ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ‘ಅರಿವಿನ ಅಭಿಯಾನ ಸ್ವಚ್ಛತಾ ಸಂವಾದ’ದಲ್ಲಿ ಪಾಲ್ಗೊಂಡರು. ಗ್ರಾಪಂ ಪಿಡಿಒ ಸುನೀಲ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಪ್ರೇರಕಿ ಜಯಾ, ಘನ ತ್ಯಾಜ್ಯ ನಿರ್ವಾಹಕ ಇಸ್ಮಾಯೀಲ್, ಜಾಗೃತಿ ವೇದಿಕೆಯ ಶಮೀಮಾ, ಪ್ರಜ್ಞಾ ಸಲಹಾ ಕೇಂದ್ರದ ವಿಲಿಯಂ ಪಾಲ್ಗೊಂಡಿದ್ದರು.

ಗ್ರಾಪಂ ಸಿಬ್ಬಂದಿ ಸದಾನಂದ ಈ ಹಿಂದಿನ ವಾರ್ಡ್ ಸಭೆಯ ವರದಿ ವಾಚಿಸಿದರು. ಗ್ರಾಪಂ ಸದಸ್ಯರಾದ ಸಾವಿತ್ರಿ, ಸಂಧ್ಯಾಕಿಶೋರ್, ಲೋಹಿತ್ ಗಟ್ಟಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶಮೀಮಾ, ಅಂಗನವಾಡಿ ಕಾರ್ಯಕರ್ತೆ ಪೂಜಾ, ಶಂಕರಿ ಎಸ್ ಭಟ್, ಜನಾರ್ದನ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News