ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್: ಇಂಗ್ಲೆಂಡ್ 85 ರನ್‌ಗೆ ಆಲೌಟ್!

Update: 2019-07-24 13:32 GMT

ಲಾರ್ಡ್ಸ್, ಜು.24: ಹೊಸ ಚೆಂಡಿನ ಬೌಲರ್ ಟಿಮ್ ಮುರ್ತಾಘ್ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಬುಧವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್‌ನ ಮೊದಲ ದಿನವೇ ಕೇವಲ 85 ರನ್‌ಗೆ ಆಲೌಟಾಗಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ವಾರದ ಹಿಂದೆ ವಿಶ್ವಕಪ್ ಕಿರೀಟ ಧರಿಸಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಮುರ್ತಾಘ್(5-13) ಹಾಗೂ ಅಡೈರ್(3-32) ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ 23.4 ಓವರ್‌ಗಳಲ್ಲಿ 85 ರನ್‌ಗಳಿಗೆ ಆಲೌಟಾಯಿತು.

  ಲಾರ್ಡ್ಸ್ ಟೆಸ್ಟ್ ಇತಿಹಾಸದಲ್ಲಿ ಮೊದಲ ಅವಧಿಯಲ್ಲಿ ಮೊದಲ ಬಾರಿ ಇಂಗ್ಲೆಂಡ್ ಆಲೌಟಾಗಿದೆ. ಮೂರು ವರ್ಷಗಳಲ್ಲಿ ನಾಲ್ಕನೇ ಬಾರಿ ಸೆಶನ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಢಾಕಾ(ಅಕ್ಟೋಬರ್ 2016), ಆಕ್ಲಂಡ್(ಮಾರ್ಚ್ 2018)ಹಾಗೂ ಬ್ರಿಡ್ಜ್‌ಟೌನ್‌ನಲ್ಲಿ(ಜನವರಿ)ಈ ಹಿಂದೆ ಇಂಗ್ಲೆಂಡ್ ಆಲೌಟಾಗಿತ್ತು. ಇಂಗ್ಲೆಂಡ್ ಸ್ವದೇಶದಲ್ಲಿ ಟೆಸ್ಟ್ ಇನಿಂಗ್ಸ್‌ನಲ್ಲಿ ಕಳಪೆ ಮೊತ್ತಕ್ಕೆ ಆಲೌಟಾಗಿದೆ.

ಇಂಗ್ಲೆಂಡ್‌ನ ಪರ ಡೆನ್ಲಿ(23), ಸ್ಟೋನ್(19) ಹಾಗೂ ಕರನ್(18)ಎರಡಂಕೆಯ ಸ್ಕೋರ್ ಗಳಿಸಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೈರ್‌ಸ್ಟೋವ್(0), ಮೊಯಿನ್ ಅಲಿ(0) ಹಾಗೂ ಕ್ರಿಸ್ ವೋಕ್ಸ್(0)ರನ್ ಖಾತೆ ತೆರೆಯಲು ವಿಫಲರಾಗಿದ್ದಾರೆ. ಇನಿಂಗ್ಸ್ ಆರಂಭಿಸಿದ್ದ ಬರ್ನ್ಸ್(6) ಹಾಗೂ ಜೇಸನ್ ರಾಯ್(5), ನಾಯಕ ಜೋ ರೂಟ್(2)ಒಂದಂಕಿ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News