ಬೈಂದೂರು: ಮಳೆಗೆ ಗೋಡೆ ಕುಸಿದು ಹಾನಿ
Update: 2019-07-24 21:08 IST
ಉಡುಪಿ, ಜು.24: ಮಳೆಯ ಕಾರಣ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸೀತು ಎಂಬವರ ಮನೆಯ ಗೋಡೆ ಕಳೆದ ರಾತ್ರಿ ಕುಸಿದು ಬಿದ್ದು ಸುಮಾರು 50,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಕಿರುಮಂಜೇಶ್ವರ ಗ್ರಾಮದ ಅಗ್ರಗೋಳಿ ಎಂಬಲ್ಲಿ ಜೆಟ್ಟು ಎಂಬವರ ವಾಸ್ತವ್ಯದ ಮನೆಯ ಗೋಡೆ ಗಾಳಿ-ಮಳೆಗೆ ಮಂಗಳವಾರ ರಾತ್ರಿ ಹಾನಿಗೊಂಡಿದ್ದು 20,000ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ.
ಎರಡು ದಿನಗಳ ಸತತ ಮಳೆಯ ಬಳಿಕ ಇಂದು ಅಪರಾಹ್ನದವರೆಗೆ ಸ್ವಲ್ಪ ವಿಶ್ರಾಂತಿ ಪಡೆದ ಮಳೆ, ಸಂಜೆಯ ಬಳಿಕ ಮತ್ತೆ ಜೋರಾಗಿ ಸುರಿಯತೊಡಗಿದೆ. ಇದರಿಂದ ತಗ್ಗು ಪ್ರದೇಶದಲ್ಲಿ ಹರಿದ ಮಳೆಯ ನೀರು ಇಳಿದುಹೋಗಿದೆ.