×
Ad

ನಾಗೇಶ್ ಪಡುಗೆ ಉಡುಪಿ ಪತ್ರಕರ್ತರ ಶೃದ್ದಾಂಜಲಿ

Update: 2019-07-24 21:10 IST

ಉಡುಪಿ, ಜು.24:ಡೆಂಗ್ ಜ್ವರದಿಂದ ಕಳೆದ ರವಿವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿವಾಹಿನಿಯೊಂದರ ಛಾಯಾಗ್ರಾಹಕ ನಾಗೇಶ್ ಪಡು ಅವರಿಗೆ ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಉಡುಪಿಯ ಪತ್ರಕರ್ತರು ಶೃದ್ದಾಂಜಲಿ ಸಭೆ ನಡೆಸಿದರು.

ಉಡುಪಿ ಪ್ರೆಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಈ ಸಭೆಯಲ್ಲಿ ಪತ್ರಕರ್ತರು ಅಕಸ್ಮಿಕವಾಗಿ ಅಗಲಿದ ಸಹೋದ್ಯೋಗಿಗೆ ನುಡಿನಮನ, ಪುಷ್ಪನಮನ ಹಾಗೂ ಒಂದು ನಿರ್ಮಿಷದ ವೌನ ಪ್ರಾರ್ಥನೆಯೊಂದಿಗೆ ಆತ್ಮಕ್ಕೆ ಸದ್ಗತಿ ಕೋರಿದರು.

ನಾಗೇಶ್ ಪಡು ಅವರ ಸಹೋದ್ಯೋಗಿಯಾಗಿದ್ದ ಸುದ್ದಿವಾಹಿನಿಗಳ ಛಾಯಾಗ್ರಾಹಕರಾದ ಅನಿಷ್ ಡಿಸೋಜ, ಹರೀಶ್ ಪಾಲೆಚ್ಚಾರ್ ಅವರ ಒಡನಾಟವನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಮಾತನಾಡಿದರು. ಶಶಿಧರ ಮಾಸ್ತಿಬೈಲು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಯಕರ ಸುವರ್ಣ, ಮೈಕೆಲ್ ರಾಡ್ರಿಗಸ್, ನಾಗರಾಜ್ ರಾವ್, ಸಂತೋಷ್ ಸರಳೇಬೆಟ್ಟು ಉಪಸ್ಥಿತರಿದ್ದರು. ದಿವಾಕರ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News