×
Ad

ಉಡುಪಿ: ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

Update: 2019-07-24 21:11 IST

ಉಡುಪಿ, ಜು. 24: ಲಯನ್ಸ್ ಜಿಲ್ಲೆ 317ಸಿ ಇದರ 2019-20ನೇ ಸಾಲಿನ ಪದಪ್ರದಾನ ಸಮಾರಂಭ ನಾಳೆ ಜು.25ರ ಸಂಜೆ 4 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಲಯನ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಜಿಲ್ಲೆ 317ಸಿ ಉಡುಪಿ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡಿದ್ದು,100 ಕ್ಲಬ್ ಹಾಗೂ 3000 ಸದಸ್ಯರನ್ನು ಹೊಂದಿದೆ ಎಂದರು.

 ಪದಪ್ರದಾನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಆಸ್ಟ್ರೇಲಿಯದ ಬ್ಯಾರಿ ಜೆ.ಪಾಲ್ಮರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.2016-18ನೇ ಸಾಲಿನ ಅಂತಾರಾಷ್ಟ್ರೀಯ ನಿರ್ದೇಶಕ ಹಾಗೂ ಲಯನ್ಸ್ ಫೌಂಡೇಷನ್‌ನ ಟ್ರಸ್ಟಿ ವಿಜಯಕುಮಾರ್ ರಾಜು ವೇಗಸ್ನಾ ಅವರು ಪದಗ್ರಹಣ ಅಧಿಕಾರಿಯಾಗಿರುವರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಪದಾಧಿಕಾರಿಗಳಾದ ಸಂಜೀವ ಟಿ.ಕರ್ಕೇರ, ಜಾರ್ಜ್ ಸ್ಯಾಮುವೆಲ್, ಡಾ.ಮಧುಸೂಧನ್ ಹೆಗ್ಡೆ ಹಾಗೂ ನೇರಿ ಕರ್ನೇಲಿಯೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News