×
Ad

ಬಂಟ್ವಾಳ ಭೂ ಬ್ಯಾಂಕ್‍ನಲ್ಲಿ ಮಾಜಿ ಅಧ್ಯಕ್ಷರ ಭಾವಚಿತ್ರ ಅನಾವರಣ

Update: 2019-07-24 21:20 IST

ಬಂಟ್ವಾಳ, ಜು. 24: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್  1963ರಲ್ಲಿ ಸ್ಥಾಪನೆಯಾದ ಬಳಿಕ ಸೇವೆ ಸಲ್ಲಿಸಿದ ಅಧ್ಯಕ್ಷರುಗಳ ಭಾವಚಿತ್ರಗಳ ಅನಾವರಣ ಕಾರ್ಯಕ್ರಮ ಬುಧವಾರ ನಡೆಯಿತು.

ಬ್ಯಾಂಕಿನ ಮಾಜಿ ಅಧ್ಯಕ್ಷ, ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ಭಾವಚಿತ್ರಗಳ ಅನಾವರಣಗೊಳಿಸಿ ಮಾತನಾಡಿ, ರಾಜ್ಯದ 177 ಪಿಎಲ್‍ಡಿ ಬ್ಯಾಂಕ್ ಗಳಲ್ಲಿ ಉಭಯ ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್‍ಗಳು ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಹಾಗೂ ರೈತರಿಗೆ ಸಕಾಲದಲ್ಲಿ ಸಾಲನೀಡಿ ಅವರ ಅಭಿವೃದ್ಧಿಯಲ್ಲಿಯೂ ಬ್ಯಾಂಕ್ ಮಹತ್ತರವಾದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದರು.

ಬಂಟ್ವಾಳ ಭೂ ಬ್ಯಾಂಕ್‍ನಲ್ಲಿ ಅಧ್ಯಕ್ಷನಾಗಿದ್ದುಕೊಂಡು ರಾಜಕೀಯ ಜೀವನ ಆರಂಭಿಸಿರುವುದನ್ನು ಮೆಲುಕು ಹಾಕಿದ ರೈ, ಪ್ರಸ್ತುತ ಬಂಟ್ವಾಳ ಭು ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲೆ ಉತ್ತಮ ಸಾಧನೆಮಾಡಿದ್ದು, ಇದಕ್ಕೆ ಶ್ರಮಿಸಿದ ಬ್ಯಾಂಕಿನ ಆಡಳಿತ ಮಂಡಳಿ, ಸಿಬಂದಿಯನ್ನು ಅಭಿನಂದಿಸಿದರು.

ಬ್ಯಾಂಕಿನ ಅಧ್ಯಕ್ಷ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಾಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷ ಜಿನರಾಜ ಆರಿಗವೆಂಕಪ್ಪ ಕಾಜವ, ನಿರ್ದೇಶಕರಾದ ಮುರಳೀಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಹೊನ್ನಪ್ಪ ನಾಯ್ಕ್, ಪರಮೇಶ್ವರ ಎಂ.ಚಮನದ್ರಹಾಸ ಕರ್ಕೇರ, ಸುಜಾತಾ, ಪುಪ್ಪಾವತಿ, ಕಸ್ಕಾಡ್9 ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಸುರೇಶ್, ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಂ.ವರ್ತಕರ ಬ್ಯಾಂಕಿನ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪ್ರಕಾಶ್ ಬಿ.ಶೆಟ್ಟಿ, ಪದ್ಮನಾಭ ನರಿಂಗಾನ, ಪ್ರಶಾಂತ್ ಕಾಜವ ಮೊದಲಾದವರಿದ್ದರು. ಜಿಪಂ ಸದಸ್ಯ, ನಿರ್ದೇಶಕ ಚಂದ್ರಪ್ರಕಾಶ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News