×
Ad

ಫುಟ್ಬಾಲ್ ಅಸೋಸಿಯೇಶನ್‌ನ ಇಂಡಿಪೆಂಡೆನ್ಸ್ ಕಪ್ ಪಂದ್ಯಾಟಕ್ಕೆ ಚಾಲನೆ

Update: 2019-07-25 17:17 IST

ಮಂಗಳೂರು, ಜು.25: ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್‌ನಲ್ಲಿ ಆಯೋಜಿಸಿರುವ 23ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಜು.25ರಿಂದ ಆ.15ರವರೆಗೆ ನಡೆಯಲಿರುವ ಈ ಪಂದ್ಯಾಟವನ್ನು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆರಂಭಗೊಂಡ ಬಳಿಕ ಪ್ರತೀ ವರ್ಷ ಫುಟ್ಬಾಲ್ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಫೈನಲ್ ಪಂದ್ಯಾಟ ವೀಕ್ಷಣೆಗೆ ಪರವೂರುಗಳಿಂದಲೂ ಅನೇಕ ಮಂದಿ ಬರುತ್ತಾರೆ. ಕ್ರೀಡಾಪಟುಗಳಿಗೆ ಅಸೋಸಿಯೇಶನ್ ನಿರಂತರ ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾಪಟುಗಳು ಮೈದಾನದಲ್ಲಿ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು. ಸೋತ ತಂಡವು ಕುಗ್ಗದೆ ಗೆದ್ದ ತಂಡವನ್ನು ಅಭಿನಂದಿಸಬೇಕು ಎಂದರು.

ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಪ್ರತಿವರ್ಷ ಪಂದ್ಯಾಟ ನಡೆಸುತ್ತಿರುವುದು ಶ್ಲಾಘನೀಯ. ಮಂಗಳೂರಿನಲ್ಲಿ ಫುಟ್ಬಾಲ್ ಕ್ರೀಡಾಂಗಣ ಉಳಿಸುವ ನಿಟ್ಟಿನಲ್ಲಿ ಅಸೋಸಿಯೇಶನ್ ಪಾತ್ರ ಮಹತ್ವದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ ಮಾತನಾಡಿ, ವಿಜೇತ ತಂಡಗಳಿಗೆ ಆಕರ್ಷಕ ರೋಲಿಂಗ್ ಟ್ರೋಫಿ, ಪರ್ಮನೆಂಟ್ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. 23ನೇ ವರ್ಷದ ಪಂದ್ಯಾವಳಿಯಾದ ಕಾರಣ ಎಲ್ಲಾ ವಿಭಾಗಗಳಲ್ಲಿ ಉತ್ತಮ ಆಟಗಾರ/ಆಟಗಾರ್ತಿ, ಉತ್ತಮ ಗೋಲ್‌ಕೀಪರ್ ಹಾಗೂ ಉತ್ತಮ ರಕ್ಷಣೆ ಆಟಗಾರ/ಆಟಗಾರ್ತಿ ಎಂಬ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಹಿರಿಯ ಆಟಗಾರ ಪಿ.ಸಿ. ಆಸಿಫ್, ಉದ್ಯಮಿ ಅಹ್ಮದ್ ಮನ್ಸೂರ್, ತರಬೇತುದಾರ ಬಿ.ಬಿ. ಥಾಮಸ್, ಚೇತನ್ ಬೆಂಗ್ರೆ, ಅನಿಲ್ ಕುಮಾರ್ ಪಿ.ವಿ., ಲತೀಫ್, ಯುವರಾಜ್ ಬೆಂಗ್ರೆ, ಉಮೇಶ್ ಉಚ್ಚಿಲ್, ಹನೀಫ್, ಜೀವನ್ ಕುಮಾರ್ ಉಪಸ್ಥಿತರಿದ್ದರು. ರಾಜ್ಯ ಫುಟ್ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ವಿಜಯ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News