×
Ad

ಮಂಗಳೂರು: ಇಬ್ಬರು ಮಹಿಳೆಯರು ಸಹಿತ ಮೂವರು ನಾಪತ್ತೆ

Update: 2019-07-25 20:19 IST
ಆಶಿಕಾ, ಪ್ರಿಯಾಂಕ, ಸಂದೀಪ್ ಪೌಲ್

ಮಂಗಳೂರು, ಜು.25: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಸಹಿತ ಮೂವರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.

ಕಂಕನಾಡಿ ಸಮೀಪದ ಪಿ.ಜಿ.(ಪೇಯಿಂಗ್ ಗೆಸ್ಟ್)ಯೊಂದರಿಂದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಿಕಾ (22) ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ. ಆಶಿಕಾ ಜು.16ರಂದು ಕಂಕನಾಡಿಯ ಪಿ.ಜಿ.ಯಿಂದ ನಾಪತ್ತೆಯಾಗಿದ್ದಾರೆ.

ಚಹರೆ: ಎತ್ತರ 4.5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳನೆ ಶರೀರ, ಕನ್ನಡ, ಇಂಗ್ಲಿಷ್, ತುಳು, ಬ್ಯಾರಿ, ಮಲಯಾಳಂ ಭಾಷೆ ಮಾತನಾಡುತ್ತಾರೆ.
ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ದೂ.ಸಂ.: 0824- 2220520 ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ದೂ.ಸಂ.: 0824- 2220800, 2220801ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

ಮಹಿಳೆ ನಾಪತ್ತೆ: ಮೂಲತಃ ಒರಿಸ್ಸಾ, ಪ್ರಸ್ತುತ ಮಂಗಳೂರು ನಿವಾಸಿ ಪ್ರಿಯಾಂಕ (28) ಎಂಬವರು ಜು.5ರಂದು ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ಎತ್ತರ 5.1 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಕೆಂಪು ಬಣ್ಣದ ಟಾಪ್ ಮತ್ತು ಪ್ಯಾಂಟ್ ಹಾಗೂ ಶಾಲ್ ಧರಿಸಿದ್ದರು. ಹಿಂದಿ, ಒರಿಸ್ಸಾ ಭಾಷೆ ಮಾತನಾಡುತ್ತಾರೆ.

ಈ ಚಹರೆಯುಳ್ಳ ಮಹಿಳೆ ಪತ್ತೆಯಾದಲ್ಲಿ ಕೊಣಾಜೆ ಪೊಲೀಸ್ ಠಾಣೆ ದೂ.ಸಂ.: 0824-2220536ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

ವ್ಯಕ್ತಿ ನಾಪತ್ತೆ: ಮಂಗಳೂರು ನಗರದ ಬಿಜೈ ನಿವಾಸಿ ಸಂದೀಪ್ ಪೌಲ್ (38) ಎಂಬವರು ಎ.18ರಂದು ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ಎತ್ತರ 5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ್ದರು. ಕನ್ನಡ, ಮಲೆಯಾಳಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.

ಈ ಚಹರೆಯುಳ್ಳ ವ್ಯಕ್ತಿಯು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ದೂ.ಸಂ.: 0824- 2220520ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News