×
Ad

ಜು.26: ಸಾರ್ವಜನಿಕ ಸಮಾಲೋಚನಾ ಸಭೆ

Update: 2019-07-25 20:31 IST

ಮಂಗಳೂರು, ಜು.25: ರಾಜ್ಯ ಸರಕಾರವು ಎಡಿಬಿ ಯೋಜನೆಯ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕುರಿತು ಮಾಹಿತಿ ನೀಡಲು ಜು.26ರಂದು ಸಂಜೆ 4 ಗಂಟೆಗೆ ವಾರ್ಡ್ ನಂ.8ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ ಕುಳಾಯಿ ಮಹಿಳಾ ಮಂಡಳಿಯಲ್ಲಿ ನಡೆಯಲಿದೆ.

ಕೆಯುಐಡಿಎಫ್‌ಸಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿದೆ.

ಸಭೆಗೆ ವಾರ್ಡ್‌ನ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News