ಮಾದಕ ವಸ್ತು ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಅಡ್ಯಾರ್ ಮಸೀದಿ ಜಮಾಅತ್ ಕಮಿಟಿ

Update: 2019-07-25 15:26 GMT

ಮಂಗಳೂರು, ಜು.25: ಅಡ್ಯಾರ್ ಪದವು ಮುಹಿಯ್ಯುದ್ದೀನ್ ಜುಮಾ ಮಸೀದಿ ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್, ಜುಗಾರಿ, ಅಮಲು ಪದಾರ್ಥಗಳನ್ನು ಸೇವಿಸುವುದು ಗಮನಕ್ಕೆ ಬಂದರೆ ಅವರ ವಿರುದ್ಧ ಜಮಾಅತ್ ಕಮಿಟಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ.

ಆಧುನಿಕತೆಯ ವಂಚನಾ ಜಾಲದಲ್ಲಿ ಸಿಲುಕಿ ಸಮಾಜ ದ್ರೋಹಿ ಚಟುವಟಿಕೆಗಳನ್ನು ನಡೆಸಲು ಪ್ರೇರಣೆಯಾಗುವಂತಹ ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆದರೆ ಅಡ್ಯಾರ್ ಪದವು ಮಸ್ಜಿದ್ ಕಮಿಟಿ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಿ ಅವರನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಸಮಾಜದಲ್ಲಿ ಮಾದರಿಗಳಾಗಿ ಬದುಕಬೇಕಾದ ಯುವಕರು ಇಂದು ಹಲವು ರೀತಿಯ ದುಷ್ಚಟಗಳ ದಾಸರಾಗುತ್ತಿದ್ದಾರೆ. ಮುನ್ನೆಲೆಯಲ್ಲಿ ನಿಂತು ನಾಡು, ರಾಜ್ಯ, ದೇಶದ ಒಳಿತಿಗಾಗಿ ಸಮಾಜಸೇವಾ ಚಟುವಟಿಕೆಗಳ ಮೂಲಕ ಸರ್ವರಿಗೂ ಮಾದರಿಯೋಗ್ಯರಾಗಿ ಸಮಾಜಮಯಖಿ ಚಿಂತನೆಗಳೊಂದಿಗೆ ಮುನ್ನುಗ್ಗುತ್ತಿರುವ ನಿಷ್ಕಳಂಕ, ನಿಷ್ಠಾವಂತ ಯುವಕರ ನಡುವೆ ಕೇವಲ ಸಣ್ಣ ಪ್ರಮಾಣದ ಗುಂಪು ಅನೇಕ ಅಕ್ರಮ ಚಟುವಟಿಗಳ ದಾಸರಾಗಿ ಮನೆಮಂದಿಗೂ ನಾಡಿಗೂ ಕೆಟ್ಟ ಹೆಸರು ತಂದು ಪರಂಪರಾಗತ ಸದಾಚಾರಗಳನ್ನು ದೂರಕ್ಕೆಸೆದು ಸ್ವಾರ್ಥ ಹಿತಾಸಕ್ತರಾಗುತ್ತಿರುವ ವರ್ತಮಾನ ಸನ್ನಿವೇಶದಲ್ಲಿ ಅಡ್ಯಾರ್ ಪದವು ಜಮಾಅತ್ ಕಮಿಟಿಗೆ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದೆ. ಜಮಾಅತ್‌ನ ಎಲ್ಲರ ಸಹಕಾರ, ಬೆಂಬಲ ನೀಡಬೇಕು ಎಂದು ಮಸೀದಿಯ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News