ಮಂಗಳೂರು: ಡೆಂಗ್ ಶಂಕಿತ 27 ಮಂದಿ ಆಸ್ಪತ್ರೆಗೆ ದಾಖಲು

Update: 2019-07-25 16:22 GMT

ಮಂಗಳೂರು, ಜು.25: ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಡೆಂಗ್ ಆರ್ಭಟ ಹೆಚ್ಚುತ್ತಲೇ ಇದ್ದು, ಕಳೆದ 20 ದಿನಗಳಿಂದ ಆರಂಭವಾದ ರೋಗವು ಹತೋಟಿಗೆ ಬರುತ್ತಿಲ್ಲ. ಮಂಗಳೂರಿನಲ್ಲಿ ಗುರುವಾರ ಕೂಡ 27 ಡೆಂಗ್ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಾಮಾರಿ ಡೆಂಗ್ ನಿಯಂತ್ರಿಸಲು ಜಿಲ್ಲಾ ಆರೋಗ್ಯ ಇಲಾಖೆ ಕಟಿಬದ್ಧವಾಗಿದೆ. ಮಂಗಳೂರು ನಗರದ ಕೊಡಯಾಲ್‌ಬೈಲ್ ಮತ್ತು ಮಣ್ಣಗುಡ್ಡೆ ವ್ಯಾಪ್ತಿಯ ಪ್ರದೇಶಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸ್ವಚ್ಛತಾ ಕಾರ್ಯ ನಡೆಸಿ, ಜಾಗೃತಿ ಮೂಡಿಸಿದರು.

 50 ಸಾವಿರ ದಂಡ

ಇಲ್ಲಿನ ಹಲವು ಮನೆಗಳ ಸುತ್ತಮುತ್ತಲಿನ ಪ್ಲಾಸ್ಟಿಕ್ ಬಕೆಟ್, ಪ್ಲಾಸ್ಟಿಕ್ ಟ್ರೇಗಳು, ಮಡಿಕೆಯ ಪಾಟ್‌ಗಳು, ತುಳಸಿಯ ಪಾಟ್‌ಗಳು, ಹೂವಿನ ಕುಂಡಗಳು, ಹಳೆಯ ಟೈರ್‌ಗಳು, ಡ್ರಮ್‌ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವ ಬಗ್ಗೆ ಸೂಚನೆ ನೀಡಿ, 50 ಸಾವಿರ ರೂ. ದಂಡವನ್ನು ಸ್ಥಳದಲ್ಲೇ ವಸೂಲಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News