×
Ad

ಮನೆ ಖರೀದಿದಾರರಿಗೆ ಮೋಸ ಮಾಡುವುದು ಅತ್ಯಾಚಾರಕ್ಕಿಂತ ಕಡಿಮೆಯೇನಲ್ಲ ಎಂದ ಬಿಜೆಪಿ ನಾಯಕ!

Update: 2019-07-25 21:56 IST

ಹೊಸದಿಲ್ಲಿ, ಜು.25: ಮನೆ ಖರೀದಿದಾರರನ್ನು ವಂಚಿಸುವುದು ಅತ್ಯಾಚಾರಕ್ಕೆ ಸಮ ಎಂದು ವಾದಿಸಿರುವ ಬಿಜೆಪಿ ನಾಯಕ ವಿಜಯ್ ಗೋಯಲ್ ತಪ್ಪಿತಸ್ಥ ಬಿಲ್ಡರ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುಂತೆ ಗುರುವಾರ ಆಗ್ರಹಿಸಿದ್ದಾರೆ.

ರಾಜ್ಯ ಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಗೋಯಲ್, ಜನರನ್ನು ಮೋಸ ಮಾಡುವ ಬಿಲ್ಡರ್‌ಗಳ ಜಾಹೀರಾತುಗಳಲ್ಲಿ ಕಾಣಿಸುವ ಸೆಲೆಬ್ರಿಟಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಲಕ್ಷಾಂತರ ಮನೆ ಖರೀದಿದಾರರು ತಾವು ಕಷ್ಟದಿಂದ ಸಂಪಾದಿಸಿದ ಹಣವನ್ನು ಪೂರ್ವ ಪಾವತಿಯಾಗಿ ನೀಡಿರುತ್ತಾರೆ. ಆದರೆ ದುರಾಸೆಯ ಬಿಲ್ಡರ್‌ಗಳು ಈ ಗ್ರಾಹಕರನ್ನು ವಂಚಿಸಿದ್ದಾರೆ ಎಂದು ಗೋಯಲ್ ಕಿಡಿಕಾರಿದ್ದಾರೆ.

ಬಿಲ್ಡರ್‌ಗಳು ಮನೆ ಖರೀದಿದಾರರನ್ನು ವಂಚಿಸಿದ್ದಾರೆ. ಇಂಥವರಿಗೆ ಮರಣ ದಂಡನೆಯಾಗಬೇಕು. ಯಾಕೆಂದರೆ ಅವರು ಮಾಡಿರುವ ಅಪರಾಧ ಅತ್ಯಾಚಾರಕ್ಕಿಂತ ಕಡಿಮೆಯೇನೂ ಅಲ್ಲ ಎಂದು ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News