ಶೈಕ್ಷಣಿಕ ಪ್ರವೇಶಕ್ಕೆ ನೇರ ಪ್ರವೇಶ

Update: 2019-07-25 16:29 GMT

ಉಡುಪಿ, ಜು.25: ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ- ಸಿಪೆಟ್(ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಸಂಸ್ಥೆಯು ಕೇಂದ್ರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತಿದೆ.

ಈ ಸಂಸ್ಥೆಯಲ್ಲಿ 2019-20ನೇ ಸಾಲಿನ ಡಿಪ್ಲೋಮಾ ಪ್ರವೇಶಕ್ಕಾಗಿ ಸಮಾಲೋಚನೆ ಮತ್ತು ನೇರಪ್ರವೇಶಕ್ಕೆ ಜು.29ರೊಳಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ), ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ವೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಕೋರ್ಸ್‌ಗೆ ಎಸೆಸೆಲ್ಸಿ ತೇರ್ಗಡೆಯಾದವರು ಹಾಗೂ ಪಿಯುಸಿ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ಅದೇ ರೀತಿ ಒಂದೂವರೆಗೆ ವರ್ಷ ಅವಧಿಯ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸಿಂಗ್ ಮತ್ತು ಟೆಸ್ಟಿಂಗ್ ಕೋರ್ಸ್‌ಗೆ ಬಿಎಸ್ಸಿ (ಕೆಮೆಸ್ಟ್ರಿ) ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದಾಗಿದೆ. ಇವುಗಳಲ್ಲಿ ಕೆಲವೇ ಸೀಟುಗಳು ಲಭ್ಯವಿದೆ.

ಅದೇ ರೀತಿ ಒಂದೂವರೆಗೆ ವರ್ಷ ಅವಧಿಯ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸಿಂಗ್ ಮತ್ತು ಟೆಸ್ಟಿಂಗ್ ಕೋರ್ಸ್‌ಗೆ ಬಿಎಸ್ಸಿ (ಕೆಮೆಸ್ಟ್ರಿ) ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದಾಗಿದೆ. ಇವುಗಳಲ್ಲಿ ಕೆಲವೇ ಸೀಟುಗಳು ಲ್ಯವಿದೆ. ಹೆಚ್ಚಿನ ಮಾಹಿತಿಗೆ ದೂ:0821-2510618/ 9480253024/ 9632688884 ಅನ್ನು ಸಂಪರ್ಕಿಸುವಂತೆ ಸಿಪೆಟ್ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥ ಆರ್.ಟಿ.ನಾಗರಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News