ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕಾಗಿದೆ: ರಮಾನಾಥ ರೈ
ಬಂಟ್ವಾಳ, ಜು. 25: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಮಣಿನಾಲ್ಕೂರು ಗ್ರಾಮ ಪಂಚಾಯತ್ ವಲಯ ಮಟ್ಟದ ಪಂಚಾಯತ್ ಮಿಲನ ಕಾರ್ಯಕ್ರಮ ಮಾವಿನಕಟ್ಟೆ ಜೀವನ್ ಜ್ಯೊತಿ ಸಭಾಂಗಣದಲ್ಲಿ ಜರಗಿತು.
ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಈಗಿನಿಂದಲೇ ಮತದಾರರನ್ನು ಸಂಪರ್ಕಿಸುವ ಮಖಾಂತರ ಮತ್ತೊಮ್ಮೆ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಬರುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯತ್ ಸಮಿತಿ ಅಧ್ಯಕ್ಷ ಹಾಗೂ ಬೂತ್ ಸಮಿತಿ ಯನ್ನು ಪುನರ್‍ರಚಿಸಿ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮುಖಾಂತರ ಪಕ್ಷಕ್ಕೆ ಶಕ್ತಿ ನೀಡುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಮಾಜಿ ಅಕ್ರಮ ಸಕ್ರಮ ಅದ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಜಗದೀಶ್ ಕೊಯಿಲ, ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಮಾಜಿ ತಾಪಂ ಸ್ಥಾಯಿ ಸಮಿತಿ ಅದ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಪಂಚಾಯತ್ ಅದ್ಯಕ್ಷೆ ಗೀತಾ ಶ್ರೀದರ ಪೂಜಾರಿ, ಯುವ ಕಾಂಗ್ರೆಸ್ ಸಾದಿಕ್ ದೇರಳ ಉಪಸ್ಥಿತರಿದ್ದರು.
ಮುಂದಿನ ಅವಧಿಗೆ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ಎನ್. ಆದಂ ಕುಂಞಿ ಹಾಗೂ ಬೂತ್ ಸಮಿತಿ ಅಧ್ಯಕ್ಷರಾಗಿ ಪೂವಪ್ಪ ಪೂಜಾರಿ, ವಿಶ್ವನಾಥ ನಾಯ್ಕ್, ಜಯ ನಾಯ್ಕ್, ನವೀನ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಯಾದವ್ ಅಂಡೀರು, ಮಹಿಳಾ ಅದ್ಯಕ್ಷರಾಗಿ ಜಯಶ್ರಿ ಆಯ್ಕೆಯಾದರು.
ಸಮಿತಿ ಅಧ್ಯಕ್ಷ ಆದಂ ಕುಂಞಿ ಸ್ವಾಗತಿಸಿ, ಮಣಿನಾಲ್ಕೂರು ಗ್ರಾಪಂಗೆ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಥ ರೈ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ಪಂಚಾಯತ್ ಸದಸ್ಯ ಮುಹಮ್ಮದ್ ಫಾರೂಕ್ ವಂದಿಸಿದರು.