ಜು.31ರಿಂದ ಆ.15ರವರೆಗೆ ಕಾಶ್ಮೀರದಲ್ಲಿ ಸೇನಾ ಕರ್ತವ್ಯ ನಿರ್ವಹಿಸಲಿರುವ ಧೋನಿ

Update: 2019-07-25 16:40 GMT

ಹೊಸದಿಲ್ಲಿ,ಜು.25: ಭಾರತೀಯ ಕ್ರಿಕೆಟಿಗ ಲೆ.ಕ.(ಗೌ) ಎಂ.ಎಸ್.ಧೋನಿ ಅವರು ಜುಲೈ 31ರಿಂದ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿ ತನ್ನ 106 ಟಿಎ ಬಟಾಲಿಯನ್(ಪ್ಯಾರಾ)ನಲ್ಲಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಧೋನಿಯವರು ಕೋರಿರುವಂತೆ ಮತ್ತು ಸೇನಾ ಮುಖ್ಯ ಕಚೇರಿಯು ಅನುಮತಿಸಿರುವಂತೆ ಅವರು ಗಸ್ತು,ಕಾವಲು ಮತ್ತು ಪೋಸ್ಟ್ ಡ್ಯೂಟಿ ನಿರ್ವಹಿಸಲಿದ್ದಾರೆ ಮತ್ತು ಯೋಧರೊಂದಿಗೆ ವಾಸವಿರಲಿದ್ದಾರೆ ಎಂದು ಅದು ತಿಳಿಸಿದೆ.

ಈ ವಾರದ ಆರಂಭದಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದ ಧೋನಿ,ಪ್ಯಾರಾ ಮಿಲಿಟರಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ತಾನು ಕ್ರಿಕೆಟ್‌ನಿಂದ ಎರಡು ತಿಂಗಳ ವಿಶ್ರಾಂತಿ ಪಡೆಯುತ್ತೇನೆ ಎಂದು ಬಿಸಿಸಿಐಗೆ ತಿಳಿಸಿದ್ದರು.

ಸೇನೆಯು 2011ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್(106 ಟಿಎ ಬಟಾಲಿಯನ್)ನ ಪ್ರಾದೇಶಿಕ ಸೇನೆ ಘಟಕಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನಿಸಿತ್ತು. ಧೋನಿ ಆಗ್ರಾ ತರಬೇತಿ ಶಿಬಿರದಲ್ಲಿ ಐದು ಪ್ಯಾರಾಚೂಟ್ ತರಬೇತಿ ಜಿಗಿತಗಳನ್ನು ಪೂರ್ಣಗೊಳಿಸಿದ ಬಳಿಕ 2015ರಲ್ಲಿ ಕ್ವಾಲಿಫೈಡ್ ಪ್ಯಾರಾಟ್ರೂಪರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News