ಮಂಗಳೂರು: ಸಂತ ಅಂತೋನಿಯವರ ಜೀವನ ಚರಿತ್ರೆ ಧಾರಾವಾಹಿ
ಮಂಗಳೂರು, ಜ. 25: ಸಂತ ಅಂತೋನಿಯವರ ಜೀವನ ಚರಿತ್ರೆ ಧಾರಾವಾಹಿ ಜು. 28ರಂದು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮ ಗುರುಗಳಾದ ಮೊನ್ಸಿಂಜೊರ್ ಮ್ಯಾಕ್ಸಿಮ್ ನರೊನ್ಹಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಬಿಷಪ್ ಹೌಸ್ ನಲ್ಲಿಂದು ಧಾರಾವಾಹಿಯ ಮುನ್ನುಡಿ ಹಾಡನ್ನು ಬಿಡುಗಡೆ ಮಾಡಿ ಅವರು ಮಾತನಾ ಡುತ್ತಿದ್ದರು.
ನಮ್ಮ ಸಮಾಜದಲ್ಲಿ ನಶಿಸಿಹೋಗುತ್ತಿರುವ ಮೌಲ್ಯ ಗಳ ಬಗ್ಗೆ ಮತ್ತೆ ಸಮಾಜಕ್ಕೆ ನೆನಪಿಸುವ ದೃಷ್ಟಿಯಿಂದ ಮತ್ತು ಸಂತ ಅಂತೋನಿಯವರ ಪವಾಡಗಳು ಅವರ ಸಂದೇಶಗಳ ಹಿನ್ನೆಲೆಯಲ್ಲಿ ಈ ಧಾರಾವಾಹಿ ಮಹತ್ವ ಪಡೆದಿದೆ ಎಂದು ಅವರು ವಿವರಿಸಿದರು.
ಕೆಥೊಲಿಕ್ ಧರ್ಮ ಸಭೆಯಲ್ಲಿ ಮಾತೆ ಮರಿಯಮ್ಮನವರ ನಂತರ ಅತೀ ಹೆಚ್ಚು ದೇವಾಲಯಗಳನ್ನು ಮತ್ತು ಪುಣ್ಯ ಕ್ಷೇತ್ರಗಳ ನ್ನು ಸಂತ ಅಂತೋನಿಯವರಿಗೆ ಸಮರ್ಪಿಸಲಾಗಿದೆ.ಈ ಧಾರಾವಾಹಿ ಜುಲೈ 28ರಂದು ಮಧ್ಯಾಹ್ನ 2ಗಂಟೆಗೆ ದೂರದರ್ಶ ನ ಚಂದನದಲ್ಲಿ ಪ್ರಸಾರವಾಗಲಿದೆ ಮುಂದೆ ಪ್ರತಿ ರವಿವಾರ 2ಗಂಟೆಯಿಂದ ಅರ್ಧ ತಾಸು ಧಾರಾವಾಹಿ ಪ್ರಸಾರವಾಗಲಿದೆ ಎಂದು ಸಂತ ಅಂತೋನಿಯವರ ಆಶ್ರಮದ ನಿರ್ದೆಶಕರಾದ ವಂ.ಒನಿಲ್ ಡಿ ಸೋಜ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿಸಹಾಯಕ ನಿರ್ದೇಶಕ ರಾದ ರೋಶನ್ ಡಿ ಸೋಜ, ತ್ರಿಶಾನ್ ಡಿ ಸೋಜ, ಧಾರಾವಾಹಿ ನಿಯ ನಿರ್ದೇಶಕ ವಿನ್ಸೆಂಟ್ ಫರ್ನಾಂಡೀಸ್, ಜೋನ್ ಎಂ.ಪೆರ್ಮ ನ್ನೂರು,ಸ್ಟಾನ್ಲಿ ಬಂಟ್ವಾಳ್ ಮೊದಲಾದವರು ಉಪಸ್ಥಿತರಿದ್ದರು.