×
Ad

ಪಾದುವ ಕಾಲೇಜ್: ಪ್ರಾಥಮಿಕ ರಂಗ ತರಬೇತಿಯ ಪ್ರಾರಂಭ

Update: 2019-07-25 22:13 IST

ಮಂಗಳೂರು: ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇವರು ಆಯೋಜಿಸಿದ 100 ದಿನಗಳ ರಂಗ ಕಾರ್ಯಗಾರದಲ್ಲಿ ಪ್ರಾರಂಭಿಕ ತರಗತಿಗಳನ್ನು ನೀನಾಸಂ ಪದವೀಧರರಾದ ಉಜ್ವಲ್ ಯು.ವಿ. ಇವರು ನಡೆಸಿಕೊಟ್ಟರು.

ಕೋಲಾಟದ ಪ್ರಾತ್ಯಕ್ಷಿಕೆ, ದೇಹದ ಚಲನೆ, ನಟನೆಗೆ ಪೂರಕವಾದ ವ್ಯಾಯಾಮಗಳು, ಹಾಗೂ ಆಶು ವಿಸ್ತರಣೆಗಳ ಮೂಲಕ ರಂಗಭೂಮಿಯ ನಾನಾ ವಿಷಯಗಳ ಮೇಲೆ ಪ್ರಾಯೋಗಿಕವಾಗಿ ಅಭ್ಯಾಸಿಸುತ್ತಾ ಶಿಬಿರಾರ್ಥಿಗಳಿಗೆ ವಿವರಿಸಿದರು.

ಉಜ್ವಲ್ ಇತ್ತೀಚಿಗೆ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ರಂಗಶಿಕ್ಷಣವನ್ನು ಪೂರೈಸಿದ್ದು, ನಾನಾ ಕಡೆ ನೃತ್ಯ ಸಂಯೋಜಕರಾಗಿ, ರಂಗ‌ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ. ನೂರು ದಿನಗಳ ಈ ಶಿಬಿರದಲ್ಲಿ ಸುಮಾರು 20 ಶಿಬಿರಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ದೇಶದ ನಾನಾ ರಂಗಶಾಲೆಗಳ ರಂಗಕರ್ಮಿಗಳು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News