×
Ad

ಮಂಗಳೂರು: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು

Update: 2019-07-25 23:44 IST

ಮಂಗಳೂರು, ಜು.25: ನಗರದ ಹಾಲ್‌ಗೆ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರ ಪುತ್ರಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕೈಬಳೆ ಕಳವಾದ ಘಟನೆ ಬುಧವಾರ ನಡೆದಿದೆ. ಕಳವು ನಡೆದ ಘಟನೆಯು ಸಿಸಿಕ್ಯಾಮೆರಾ ಫೂಟೇಜ್‌ನಲ್ಲಿ ದಾಖಲಾಗಿದೆ.

ಸ್ಥಳೀಯ ನಿವಾಸಿ ಅಬ್ದುಲ್ ಸಮದ್ ಎಂಬವರ ಪುತ್ರಿ ಅವ್ಹ (2 ವರ್ಷ) ಕುತ್ತಿಗೆಯಲ್ಲಿದ್ದ ಒಂದು ಪವನ್ ಚಿನ್ನ ಹಾಗೂ ಎರಡು ಚಿನ್ನದ ಕೈಬಳೆ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

ಜು.24ರಂದು ಮಂಗಳೂರು ನಗರದ ಹಾಲ್‌ನಲ್ಲಿದ್ದ ಮದುವೆ ಕಾರ್ಯಕ್ರಮದಲ್ಲಿ ಅಬ್ದುಲ್ ಸಮದ್ ಕುಟುಂಬ ಪಾಲ್ಗೊಂಡಿತ್ತು. ಮಧ್ಯಾಹ್ನ 2ರಿಂದ 2:30ರ ಸುಮಾರು ಅಬ್ದುಲ್ ಸಮದ್ ಎಂಬವರ ಪುತ್ರಿ ಅವ್ಹ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಕೈಬಳೆಗಳನ್ನು ಅಪರಿಚಿತರು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News