ರಾಜ್ಯದಲ್ಲಿ ಬಿಜೆಪಿ ಆಡಳಿತ: ಮೂಡುಬಿದಿರೆಯಲ್ಲಿ ವಿಜಯೋತ್ಸವ
Update: 2019-07-26 22:17 IST
ಮೂಡುಬಿದಿರೆ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು, ಮೂಡುಬಿದಿರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಸಂಜೆ ಸಂಭ್ರಮಾಚರಿಸಿದರು.
ಬಿಜೆಪಿ ಮೂಡುಬಿದಿರೆ ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಮಾತನಾಡಿ, ಕಳೆದ 14 ತಿಂಗಳಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಯಲ್ಲಿದ್ದ ಲೂಟಿ ಆಡಳಿತ ಇಂದು ಅಂತ್ಯಗೊಂಡಿದೆ. ಬಿಜೆಪಿಯ ಬಗ್ಗೆ ಜನತೆಗೆ ವಿಶ್ವಾಸವಿದ್ದು, ಅಭಿವೃದ್ಧಿಯತ್ತ ರಾಜ್ಯ ಸಾಗುತ್ತದೆ ಎಂದರು.
ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ಪ್ರಸಾದ್ ಭಂಡಾರಿ, ಸ್ವಾತಿ ಪ್ರಭು, ಶ್ವೇತಾ ಕುಮಾರಿ, ದಿವ್ಯಾ ಜಗದೀಶ್, ಮಾಜಿ ಸದಸ್ಯ ಲಕ್ಷ್ಮಣ್ ಪೂಜಾರಿ, ದಿನೇಶ್ ಪೂಜಾರಿ ಮಾರೂರು, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಎಂ.ಕೆ, ಮುಖಂಡರ ಗೋಪಾಲ ಶೆಟ್ಟಿಗಾರ್, ಶಶಿಧರ್ ಅಂಚನ್, ಸತೀಶ್ ಶೆಟ್ಟಿ, ಸುನೀಲ್ ಇರುವೈಲು, ರಾಜೇಶ್ ಶೆಟ್ಟಿ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.