ಫಿಲಿಪ್ಪೀನ್ಸ್: ಲುಝಾನ್ ದ್ವೀಪದಲ್ಲಿ ಪ್ರಬಲ ಭೂಕಂಪ; ಕನಿಷ್ಠ 8 ಸಾವು

Update: 2019-07-27 08:54 GMT

ಮನಿಲಾ: ಉತ್ತರ ಫಿಲಿಪ್ಪೀನ್ಸ್ ನ ಬಟನೆಸ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಎಂಟು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.4  ಹಾಗೂ 5.9 ತೀವ್ರತೆಯ ಎರಡು ಭೂಕಂಪಗಳು ಕೆಲವೇ ಗಂಟೆಗಳ ಅಂತರದಲ್ಲಿ  ಭೂಮಿಯನ್ನು ನಡುಗಿಸಿದ್ದವು.

ದೇಶದ ಅತ್ಯಂತ ದೊಡ್ಡ ದ್ವೀಪವಾದ ಲುಝಾನ್ ನ ಉತ್ತರದ ವಿರಳ ಜನಸಂಖ್ಯೆಯಿರುವ ಸ್ಥಳಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಹಲವಾರು ಕಟ್ಟಡಗಳು ಉರುಳಿ ರಸ್ತೆಗಳಲ್ಲಿ ದೊಡ್ಡ ಬಿರುಕು ಬಿಟ್ಟಿವೆ. ಭಯಭೀತ ಜನರು ತಮ್ಮ ಮನೆಗಳಿಂದ ಹೊರಗೋಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಮೊದಲನೇ ಭೂಕಂಪ ಬೆಳಗ್ಗೆ 4.15ಕ್ಕೆ ಸಂಭವಿಸಿದಾಗ ಹೆಚ್ಚಿನವರು ನಿದ್ದೆಯಲ್ಲಿದ್ದರೆ ಇನ್ನೊಂದು ಭೂಕಂಪ ನಾಲ್ಕು ಗಂಟೆಗಳ ತರುವಾಯ ಸಂಭವಿಸಿದೆ. ನಂತರ ಕನಿಷ್ಠ ಮೂರು ಕಂಪನಗಳು ಸಂಭವಿಸಿ ಜನರಲ್ಲಿ ಇನ್ನಷ್ಟು ನಡುಕ ಹುಟ್ಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News