ಕುಂಬಳೆಯಲ್ಲಿ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ
ಕಾಸರಗೋಡು : ಶ್ರೀಲಂಕಾ ಪ್ರಧಾನ ಮಂತ್ರಿ ರನಿಲ್ ವಿಕ್ರಮ ಸಿಂಘೆ ಇಂದು ಕುಂಬಳೆ ಸಮೀಪದ ಬೇಳ ಕುಮಾರ ಮಂಗಲದ ಶ್ರೀ ಸುಬ್ರಹಮಣ್ಯ ದೇವಸ್ಥಾನ ದರ್ಶನ ಪಡೆದರು .
ಶುಕ್ರವಾರ ಕೊಲ್ಲೂರು ಕ್ಷೇತ್ರ ದರ್ಶನ ಪಡೆದು ಮಂಗಳೂರು ಮೂಲಕ ಹೆಲಿಕಾಪ್ಟರ್ ನಲ್ಲಿ ಬೇಕಲ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಪ್ರಧಾನಿಯವರು ರಾತ್ರಿ ಉದುಮದ ರೆಸಾರ್ಟ್ ನಲ್ಲಿ ತಂಗಿದ್ದರು.
ಇಂದು ಬೆಳಗ್ಗೆ ಕುಮಾರಮಂಗಲ ದೇವಸ್ಥಾನಕ್ಕೆ ಆಗಮಿಸಿದ ವಿಕ್ರಮ ಸಿಂಘೆ ನಂತರ ದರ್ಶನ ಪಡೆದರು. ದೇವಸ್ಥಾನ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು . ಪ್ರಧಾನ ಮಂತ್ರಿಯವರ ವಾಹನ ತೆರಳುತ್ತಿರುವ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ತರಲಾಗಿತ್ತು. ದೇವಸ್ಥಾನಕ್ಕೆ ತಲುಪಿದ ವಿಕ್ರಮ ಸಿಂಘೆ ಯವರನ್ನು ಆಡಳಿತ ಸಮಿತಿ ಸ್ವಾಗತಿಸಿದರು .
ದರ್ಶನ ಸಮಯದಲ್ಲಿ ಅರ್ಚಕ ಸೇರಿದಂತೆ ಹದಿನೈದು ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು . ಕುಮಾರಮಂಗಲದಿಂದ ಬೇಕಲಕ್ಕೆ ಕಾರು ಮೂಲಕ ತೆರಳಿದ ವಿಕ್ರಮ ಸಿಂಘೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಡಾ . ಡಿ ಸಜಿತ್ ಬಾಬು ನೇತೃತ್ವದಲ್ಲಿ ಬೀಳ್ಕೊಡಲಾಯಿತು.